ನಿಮ್ಮ ಮುಖ ಗೋಲ್ಡನ್ ಗ್ಲೋ ಆಗಿಸಲು ಈ ಫೇಸ್ ಪ್ಯಾಕ್ ಬಳಸಿ

ಬೆಂಗಳೂರು, ಭಾನುವಾರ, 24 ಫೆಬ್ರವರಿ 2019 (12:37 IST)

ಬೆಂಗಳೂರು : ಎಲ್ಲರಿಗೂ ತಾವು ಅಂದವಾಗಿ ಕಾಣಬೇಕೆಂಬ ಹಂಬಲ ಇದ್ದೇಇರುತ್ತದೆ. ಅದಕ್ಕಾಗಿ ಪಾರ್ಲರ್ ಗಳಿಗೆ ಹೋಗಿ ತುಂಬಾ ಹಣ ಖರ್ಚು ಮಾಡುವ ಬದಲು ಮನೆಯಲ್ಲಿ ಈ ಫೇಸ್ ಪ್ಯಾಕ್ ಬಳಸಿ ನಿಮ್ಮ ಮುಖವನ್ನು ಗೋಲ್ಡನ್ ಗ್ಲೋ ಆಗಿಸಿ.


ಮುಲ್ತಾನ್ ಮಿಟ್ಟಿ 1 ಟೀ ಚಮಚ, ಮಂಜಿಷ್ಟ ½ ಟೀ ಚಮಚ, ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ 1 ಟೀ ಚಮಚ,  ನಿಂಬೆ ಹಣ್ಣಿನ ಸಿಪ್ಪೆಯ ಪುಡಿ 1 ಟೀ ಚಮಚ, ಬಿಟ್ ರೋಟ್ ಪೇಸ್ಟ್ 1 ಟೀ ಚಮಚ, ಗುಲಾಬಿ ಹೂವಿನ ದಳದ ಪೇಸ್ಟ್ 1 ಟೀ ಚಮಚ, ಲವಂಗ ಪುಡಿ ¼  ಟೀ ಚಮಚ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. (ಆದರೆ ಆಯಿಲ್ ಸ್ಕೀನ್ ಇರುವವರು ಈ ಪೇಸ್ಟ್ ಗೆ ರೋಸ್ ವಾಟರ್ ಬಳಸಿ. ಹಾಗೇ ನಾರ್ಮಲ್ ಸ್ಕೀನ್ ಗೆ ಹಾಲನ್ನು ಹಾಕಿ ಮಿಕ್ಸ್ ಮಾಡಿ).


ನಂತರ ಈ ಪೇಸ್ಟ್ ನ್ನು ಕಣ್ಣಿನ ಭಾಗ ಬಿಟ್ಟು ಮುಖದ ಎಲ್ಲಾ ಕಡೆ ಹಚ್ಚಿ ½ ಗಂಟೆ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ. ಈ ಫೇಸ್ ಪ್ಯಾಕ್ ಬಳಸಿದ ನಂತರ 1 ಗಂಟೆಯ ವರೆಗೂ ಯಾವುದೇ ಸೋಪ್ ಅಥವಾ ಫೇಸ್ ವಾಶ್ ಬಳಸಬಾರದು.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೊಟ್ಟೆಹುಣ್ಣು ಸಮಸ್ಯೆ ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಪದೇ ಪದೇ ಹೊಟ್ಟೆ ನೋವು ಬರುತ್ತಿದ್ದರೆ ಹೊಟ್ಟೆಯಲ್ಲಿ ಹುಣ್ಣಾಗಿದೆ ಎಂದರ್ಥ. ಈ ಹೊಟ್ಟೆ ...

news

ಬೇಸಿಗೆ ಕಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಈ ಜ್ಯೂಸ್ ಗಳನ್ನು ಕುಡಿಸಿರಿ

ಬೆಂಗಳೂರು : ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ...

news

ಪ್ರತಿದಿನ 1 ಬಾದಾಮಿ ಸೇವಿಸಿದರೆ ಇಷ್ಟೆಲ್ಲ ಪ್ರಯೋಜನಗಳಿವೆಯೇ?

ಹಿಂದಿನ ಕಾಲದಲ್ಲಿ ಒಂದು ಮಾತು ಪ್ರಚಲಿತದಲ್ಲಿತ್ತು ದಿನಕ್ಕೆ 1 ಸೇಬನ್ನು ಸೇವಿಸಿ ವೈದ್ಯರಿಂದ ದೂರವಿರಿ ...

news

ಹಲಸಿನಕಾಯಿ ಬೋಂಡಾ

ಕೆಲವು ತಿನಿಸುಗಳನ್ನು ಎಷ್ಟು ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎಂದು ಅನ್ನಿಸುತ್ತಲೇ ಇರುತ್ತದೆ. ...