ಎಣ್ಣೆಯುಕ್ತ ಚರ್ಮದ ಸಮಸ್ಯೆಯನ್ನು ನಿವಾರಿಸಲು ಈ ಫೇಸ್ ಸ್ಕ್ರಬ್ ಬಳಸಿ

ಬೆಂಗಳೂರು| pavithra| Last Modified ಮಂಗಳವಾರ, 12 ಜನವರಿ 2021 (07:07 IST)
ಬೆಂಗಳೂರು : ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಮೊಡವೆ, ಗುಳೆಗಳು, ಕಪ್ಪುಕಲೆ  ಮುಂತಾದವು ಮುಖದಲ್ಲಿ ಮೂಡುತ್ತದೆ. ಅಲ್ಲದೇ ಇದರಿಂದ ಮುಖದ ಅಂದ ಕೆಡುತ್ತದೆ. ಹಾಗಾಗಿ ಈ ಚರ್ಮದ ಸಮಸ್ಯೆಯನ್ನು ನಿವಾರಿಸಲು ಆಗಾಗ ಫೇಸ್ ಸ್ಕ್ರಬ್ ಗಳನ್ನು ಮಾಡಬೇಕು.

ಆಪಲ್, ನಿಂಬೆ ಮತ್ತು ಮೊಸರನ್ನು ಜಗತ್ತಿನ ಅತ್ಯುತ್ತಮ ಎಪ್ಪೋಲಿಯೇಟಿಂಗ್ ಏಜೆಂಟ್  ಎಂದು ಕರೆಯುತ್ತಾರೆ. ಇದು ಎಣ್ಣೆಯುಕ್ತ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಚರ್ಮದಲ್ಲಿರುವ ಎಣ್ಣೆಯಂಶವನ್ನು ತೊಡೆದು ಹಾಕಿ ಸತ್ತ ಚರ್ಮ ಕೋಶಗಳನ್ನು ನಿವಾರಿಸುತ್ತದೆ.

ಹಾಗಾಗಿ 1 ಚಮಚ ನಿಂಬೆ ರಸ, ಮೊಸರು, ತುರಿದ ಸೇಬು ಇವಿಷ್ಟನ್ನು ಮಿಕ್ಸ್ ಮಾಡಿ ಚರ್ಮಕ್ಕೆ ಸ್ಕ್ರಬ್ ಮಾಡಿ 15 ನಿಮಿಷ ಬಿಟ್ಟು ಮುಖ ವಾಶ್ ಮಾಡಿ.ಇದರಲ್ಲಿ ಇನ್ನಷ್ಟು ಓದಿ :