ಬೆಂಗಳೂರು : ಮುಖದಲ್ಲಿ ಮೊಡವೆ ಸಮಸ್ಯೆ ನಿವಾರಿಸಿ ಮುಖದ ಕಾಂತಿ ಹೆಚ್ಚಿಸಲು ಕೆಲವರು ಹಲವಾರು ಕ್ರೀಂಗಳನ್ನು ಬಳಸುತ್ತಾರೆ. ಅದರ ಬದಲು ಈ ಹಣ್ಣಿನ ಸಿಪ್ಪೆಯನ್ನು ಬಳಸಿ.ಕಿತ್ತಲೆ ಹಣ್ಣು ಮುಖದ ಕಾಂತಿ ಹೆಚ್ಚಿಸಲು ಬಹಳ ಸಹಕಾರಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಅರೆದು ಅದರ ಪೇಸ್ಟ್ ನ್ನು ಮೊಡವೆಗಳಿಗೆ ಹಚ್ಚುವುದರಿಂದ ಮೊಡವೆಗಳು ಶಮನವಾಗುತ್ತದೆ. ಹಾಗೇ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಉಜ್ಜುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.