ಕಿವಿ ನೋವಿಗೆ ಈ ಮನೆಮದ್ದು ಉಪಯೋಗಿಸಿ ನೋಡಿ!!

ಬೆಂಗಳೂರು, ಮಂಗಳವಾರ, 17 ಜುಲೈ 2018 (18:22 IST)

ಸಹಿಸುವುದು ಅಸಾಧ್ಯವಾದ ನೋವೆಂದರೆ ಅದು ಕಿವಿ ನೋವು. ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಕಾಡುವ ನೋವು ಇದಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ. ಈ ರೀತಿಯ ನೋವುಗಳಿಗೆ ಮನೆಯಲ್ಲಿಯೇ ಮಾಡಬಹುದಾದ ಕೆಲವು ಮನೆಮದ್ದುಗಳನ್ನು ತಿಳಿಯೋಣ
- ಗಜ ನಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ತುಪ್ಪ ಬೆರೆಸಿ ಕಾಯಿಸಿ ಬೆಚ್ಚಗಿನ ರಸವನ್ನು ಕಿವಿಗೆ  ಹಾಕಿದರೆ ಕಿವಿ ನೋವು ಗುಣವಾಗುತ್ತದೆ.
 
- ಎಕ್ಕದ ಎಲೆಗಳನ್ನು ತುಪ್ಪದಲ್ಲಿ ಹುರಿದು ಅದರಿಂದ ರಸ ತೆಗೆದು ನಿಯಮಿತವಾಗಿ ಕಿವಿಗಳಿಗೆ ಹಾಕಿದರೆ ಕಿವಿ ನೋವು, ಕಿವಿ ಸೋರುವುದು ಮತ್ತು ಇತರೆ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.
 
- ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸ ತೆಗೆದು ಕೆಲವು ಹಂನಿಗಳನ್ನು ನೊವಿರುವ ಕಿವಿಗೆ ಹಾಕಿದರೆ ಅದು ನೋವನ್ನು ನಿವಾರಿಸಿ ಕಿವಿ ಸೋರುವುದನ್ನು ಕಡಿಮೆಗೊಳಿಸುತ್ತದೆ. 
 
- ಕಿವಿಯಲ್ಲಿ ಕೀಟ ಅಥವಾ ಇರುವೆ ಹೊಕ್ಕಿದರೆ ಸ್ವಲ್ಪ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬೆಚ್ಚಗೆ ಮಾಡಿ ಕಿವಿಗೆ ಹಾಕಿ, ಕೆಲವು ಸೆಕೆಂಡುಗಳ ನಂತರ ಕಿವಿಯನ್ನು ಕೆಳಮುಖವಾಗಿ ಮಾಡಿ ಎಣ್ಣೆಯನ್ನು ಕಿವಿಯಿಂದ ತೆಗೆಯಿರಿ.
 
- 2 ಹನಿಗಳಷ್ಟು ತುಳಸಿಯ ರಸವನ್ನು ನೋವಿರುವ ಕಿವಿಗೆ ಹಾಕುವುದರಿಂದ ನೋವು ಕಡಿಮೆಯಾಗುತ್ತದೆ.
 
- ಸ್ವಚ್ಛವಾದ ಟಾವೆಲ್‌ ಅನ್ನು ಬಿಸಿನೀರಿಗೆ ಅದ್ದಿ ಅದನ್ನು 20 ನಿಮಿಷಗಳ ಕಾಲ ನೋವಿರುವ ಕಿವಿಗೆ ಮೃದುವಾಗಿ ಒತ್ತಿ ಹಿಡಿಯಿರಿ ಈ ರೀತಿ ಮಾಡುವುದರಿಂದ ಕಿವಿ ನೋವು ಅಥವಾ ಕಿವಿ ಬಾತುಕೊಂಡಿದ್ದರೆ ಬೇಗನೇ ಕಡಿಮೆಯಾಗುತ್ತದೆ.
 
- ಚಮಚವನ್ನು ಬಿಸಿ ನೀರಿನಲ್ಲಿಟ್ಟು ಬಿಸಿ ಮಾಡಿ ಅದಕ್ಕೆ ಬಾದಾಮಿ ಎಣ್ಣೆಯನ್ನು ಹಾಕಿ ಕಿವಿಗೆ ಹಾಕಿದರೆ ಕಿವಿನೋವು ಕಡಿಮೆಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪ್ರಿಯತಮನಿಗೆ ಬೇಸರವಾಗದ ಹಾಗೆ ಲೈಂಗಿಕ ಕ್ರಿಯೆಗೆ ನೋ ಹೇಳುವುದು ಹೇಗೆ?

ಬೆಂಗಳೂರು: ಕೆಲವೊಮ್ಮೆ ಮಹಿಳೆಯರಿಗೆ ಲೈಂಗಿಕ ಸುಖ ಬೇಡವೆನಿಸಬಹುದು. ಆ ಸಂದರ್ಭದಲ್ಲಿ ತನ್ನ ಬಳಿಗೆ ಬರುವ ...

news

ನಿಮ್ಮ ಮೆದುಳನ್ನು ಚುರುಕುಗೊಳಿಸಲು ಸಿಂಪಲ್ ಆಗಿ ಹೀಗೆ ಮಾಡಿ ಸಾಕು

ಬೆಂಗಳೂರು : ವ್ಯಾಯಾಮ, ಯೋಗ, ಜಿಮ್ ಯಾವುದನ್ನೂ ಮಾಡಲು ಸಾಧ್ಯವಾಗದವರಿಗೆ ಬೆಸ್ಟ್ ಎಂದರೆ ವಾಕಿಂಗ್. ಇದಕ್ಕೆ ...

news

ರುಚಿಕರವಾದ ಖರ್ಜೂರದ ಲಾಡು ಮಾಡುವ ಬಗೆ ಇಲ್ಲಿದೆ ನೋಡಿ

ಬೆಂಗಳೂರು: ಮಕ್ಕಳಿಗೆ ಹೊರಗಡೆಯಿಂದ ತಿಂಡಿ ತಂದು ಕೊಡುವುದರ ಬದಲು ಮನೆಯಲ್ಲಿ ರುಚಿಕರವಾದ ತಿಂಡಿಗಳನ್ನು ...

news

ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು!

ಬೆಂಗಳೂರು : ದೇಹವು ಬಯಸುವಂತಹ ಕಾಮವನ್ನು ತಣಿಸಲು ಪುರುಷರು ಮಾಡುವಂತಹ ಕ್ರಿಯೆಯೆ ಹಸ್ತಮೈಥುನ. ಅತಿಯಾದ ...