ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳು, ಅಲರ್ಜಿ, ಮಾಲಿನ್ಯದಿಂದ ನಮ್ಮಲ್ಲಿ ಕೆಮ್ಮು, ಜ್ವರ, ಒಣಕೆಮ್ಮು, ನೆಗಡಿ ಕಾಣಿಸಿಕೊಳ್ಳುತ್ತದೆ. ಒಣಕೆಮ್ಮು ಅಂತಹ ದೊಡ್ಡ ರೋಗವಲ್ಲದಿದ್ದರೂ ಅದನ್ನು ಕಡಿಮೆ ಮಾಡುವುದು ಅಷ್ಟು ಸುಲಭದ ವಿಷಯವಲ್ಲ. ಒಣಕೆಮ್ಮು ಒಮ್ಮೆ ಅಂಟಿಕೊಂಡರೆ ಅದರ ಜೊತೆಗೆ ಎದೆ ನೋವು, ಹೊಟ್ಟು ನೋವು, ತಲೆ ನೋವು, ಗಂಟಲ ಕಿರಿಕಿರಿ ಹೀಗೆ ಒಂದರಮೇಲೊಂದು ಶುರುವಾಗುತ್ತದೆ. ಇದಕ್ಕೆ ಸುಲಭವಾದ ಮನೆಮದ್ದುಗಳನ್ನು ಬಳಸಿಕೊಂಡು ಒಣಕೆಮ್ಮನ್ನು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯೋಣ - *