ಸಪೋಟ ಹಣ್ಣಿನಲ್ಲಿರುವ ವಿಶಾಲ ಶ್ರೇಣಿಯ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಶ್ರೇಷ್ಠವಾಗಿರುವುದಲ್ಲದೆ ತಿನ್ನಲು ಅತ್ಯಂತ ರುಚಿಯಾಗಿಯೂ ಇರುತ್ತದೆ. ಉತ್ಕರ್ಷಣ ನಿರೋಧಿ ಅಂಶಗಳಿಂದ ಶ್ರೀಮಂತವಾಗಿರುವ ಸಪೋಟ ವಿಟಮಿನ್ ಇ, ಎ, ಸಿ ಮತ್ತು ಕಬ್ಬಿಣ ಮತ್ತು ತಾಮ್ರದ ಗುಣಗಳನ್ನು ಹೊಂದಿದೆ. * ವಿಟಮಿನ್ ಎ ಅಂಶವನ್ನು ಹೊಂದಿರುವ ಚಿಕ್ಕುವಿನಿಂದ ಕಣ್ಣಿನ ದೃಷ್ಟಿ ಸುಧಾರಣೆಯಾಗುತ್ತದೆ. * ಸಪೋಟದಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ.