ಬೆಂಗಳೂರು : ನಿದ್ರೆ ಚೆನ್ನಾಗಿ ಮಾಡುವವರು ಆರೋಗ್ಯವಾಗಿರುತ್ತಾರೆ ಎಂದು ಹೇಳುತ್ತಾರೆ. ಆದರೆ ನಿದ್ರೆಗೆ ಸಂಬಂಧಪಟ್ಟ ಕೆಲವು ಸಮಸ್ಯೆಗಳು ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ಆದ್ದರಿಂದ ಇವುಗಳ ಬಗ್ಗೆ ಆರಂಭದಲ್ಲಿಯೇ ಎಚ್ಚರವಹಿಸಿ. *ಕೆಲವರಿಗೆ ನಿದ್ರೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. ಇದು ವಯಸ್ಕರಿಗಿಂತಲೂ ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿದ್ರೆಯ ಕೊರತೆ ಅಥವಾ ಒತ್ತಡದ ಪರಿಣಾಮದಿಂದ ಇದು ಉಂಟಾಗುತ್ತದೆ. ವ್ಯಕ್ತಿಗೆ ತಾನು ನಡೆಯುತ್ತಿರುವುದರ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಈ ಸಮಸ್ಯೆ ಅಪಾಯವನ್ನುಂಟುಮಾಡಬಹುದು. *ಕೆಲವರು ನಿದ್ರೆಯಲ್ಲಿ ಹಲ್ಲು