ದೀಪಾವಳಿ ಹಬ್ಬ ಸ್ವಯಂ ಪ್ರೀತಿಯು ನಮ್ಮನ್ನು ಮತ್ತಷ್ಟು ಸಂತೋಷಗೊಳಿಸುತ್ತದೆ. ನಾವು ಮೊದಲು ನಮ್ಮನ್ನು ಪ್ರೀತಿಸಿದಾಗ ಮನಸ್ಸು ಮತ್ತು ಆರೋಗ್ಯದಲ್ಲಿ ಸುಧಾರಣೆ ಖಂಡಿತ! ಹಾಗಿರುವಾಗ ಈ ಕೆಲವು ಸಲಹೆಗಳು ನಿಮಗಾಗಿ. ಈ ವರ್ಷದ ಹಬ್ಬದಂದು ನಿಮ್ಮನ್ನು ನೀವು ಸ್ವಲ್ಪ ಹೆಚ್ಚು ಪ್ರೀತಿಸಲು ಒಂದು ಹೆಜ್ಜೆ ಮುಂದಿಡಿ. ಮನೆಗೆ ಏನಾದರು ವಿಶೇಷವಾದ ಉಡುಗೊರೆಯನ್ನು ಖರೀದಿಸಿ. ನೀವು ಸುಂದರವಾದ ಹೊಸ ಬಟ್ಟೆಯನ್ನು ಧರಿಸಿ ಅಲಂಕರಿಸಿಕೊಳ್ಳಿ. ಸಿಹಿ ತಿಂಡಿಗಳು ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಸವಿಯಿರಿ.