ಬೆಂಗಳೂರು: ದಪ್ಪಗಿದ್ದವರಿಗೆ ಸಣ್ಣಗಾಗಬೇಕು ಎಂಬ ಚಿಂತೆಯಾದರೆ, ಸಣ್ಣಗಿರುವವರಿಗೆ ದಪ್ಪಗಾಗಬೇಕು ಎಂಬ ಹಂಬಲ. ದಪ್ಪಗಾಗಬೇಕು ಎಂದು ಏನೆಲ್ಲಾ ತಿಂದರೂ ಕೆಲವರು ದಪ್ಪಗಾಗುವುದಿಲ್ಲ. ದಪ್ಪಗಾಗಬೇಕು ಎನ್ನುವವರಿಗೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಪನ್ನೀರ್, ಚೀಸ್ , ಚಿಕನ್ , ಮೀನು, ಹಾಲಿನ ಉತ್ಪನ್ನಗಳು, ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಕೊಬ್ಬಿನಂಶವಿರುವ ಮೊಸರು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಮೊಸರನ್ನ ತಿನ್ನುತ್ತಾ ಬಂದರೆ ದೇಹಕ್ಕೂ ಒಳ್ಳೆಯದು, ತೂಕವೂ ಹೆಚ್ಚುವುದು.