ಬೆಂಗಳೂರು: ಕಲ್ಲಂಗಡಿ ಹಣ್ಣು ತಿನ್ನುವಾಗ ಅದರ ಬೀಜವನ್ನು ಉಗಿದು ಬಿಡುತ್ತೇವೆ. ಆದರೆ ಅದು ನೀಡುವ ಆರೋಗ್ಯಕರ ಉಪಯೋಗಗಳನ್ನು ತಿಳಿದುಕೊಂಡರೆ ಉಗಿಯುವುದನ್ನು ಖಂಡಿತಾ ಬಿಡುತ್ತೀರಿ. ಅಂತಹದ್ದೇನಿದೆ ಅದರಲ್ಲಿ ಎನ್ನುತ್ತೀರಾ? ಕಲ್ಲಂಗಡಿ ಹಣ್ಣಿನ ಜತೆ ಹಸಿಯಾಗಿ ತಿನ್ನಲು ಇಷ್ಟವಿಲ್ಲದಿದ್ದರೆ, ಒಣಗಿಸಿ ಕುರು ಕುರು ಎಂದು ಸವಿಯಬಹುದು. ಇದರಲ್ಲಿ ಸೆಲೆನಿಯಂ, ಪೊಟೇಷಿಯಂ, ಝಿಂಕ್ ಅಂಶ ಜಾಸ್ತಿಯಿದೆ ಎಂದು ಸಂಶೋಧಕರು ಹೇಳುತ್ತಾರೆ. ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಂತೆ. ಅಲ್ಲದೆ ರಕ್ತದೊತ್ತಡ ಏರೋದಿಲ್ಲ. ಜತೆಗೆ ದೇಹದ