ಬೆಂಗಳೂರು: ಫ್ಯಾಶನ್ ಗಾಗಿ ಹೈ ಹೀಲ್ಡ್ ಚಪ್ಪಲಿ ಧರಿಸುವ ಮಹಿಳೆಯರು ಇದನ್ನು ಓದಲೇಬೇಕು. ಇಂತಹ ಚಪ್ಪಲಿ ಧರಿಸುವವರಿಗೆ ಏಮ್ಸ್ ಆಸ್ಪತ್ರೆ ತಜ್ಞರು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.ಹೈಹೀಲ್ಡ್, ಕೆಳಗೆ ಸೂಜಿ ಮೊನೆಯಂತಹ ತಳ ಭಾಗದ ಚಪ್ಪಲಿ ಧರಿಸುವುದು ಫ್ಯಾಶನ್ ಇರಬಹುದು. ಆದರೆ ಇಂತಹ ಚಪ್ಪಲಿ ಧರಿಸುವುದರಿಂದ ಆರ್ಥರೈಟಿಸ್, ಕೀಲು ನೋವಿನಂತಹ ಸಮಸ್ಯೆ ಬರುತ್ತದೆ ಎಂದು ಏಮ್ಸ್ ನ ತಜ್ಞರು ಎಚ್ಚರಿಕೆ ನೀಡಿದ್ದಾರೆ.ಇಂತಹ ಚಪ್ಪಲಿಯನ್ನು ಸುದೀರ್ಘ ಸಮಯದವರೆಗೆ ಧರಿಸುವುದರಿಂದ ಕಾಲಿನ ಮೂಳೆಗೆ ಹಾನಿಯಾಗಬಹುದು.