ಬಹುರಾಷ್ಟ್ರೀಯ ಪ್ರಖ್ಯಾತಿಯನ್ನು ಹೊಂದಿರುವ, ಹೆಂಗಳೆಯರ ಅಚ್ಚುಮೆಚ್ಚಿನ ಆಲಿವ್ ಎಣ್ಣೆಯು ಕೇವಲ ಅಡುಗೆಗಷ್ಟೇ ಅಲ್ಲದೇ ಚರ್ಮ ಮತ್ತು ಕೇಶದ ಆರೋಗ್ಯದಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಡಿಟರೇನಿಯನ್ ಪ್ರದೇಶಗಳಲ್ಲಿ ಬೆಳೆಯುವ ಆಲಿವ್ ಮರದಲ್ಲಾಗುವ ಹಣ್ಣನ್ನು ಹಿಂಡಿ ಆಲಿವ್ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. - ಆಲಿವ್ ಎಣ್ಣೆಯು ಕೊಬ್ಬಿನಂಶವನ್ನು ಕಡಿಮೆಗೊಳಿಸುವುದಲ್ಲದೇ ದೇಹದಲ್ಲಿರುವ ಕೊಲೆಸ್ಟರೋಲ್ ಆಕ್ಸಿಡೇಟಿವ್ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಹೃದಯಕ್ಕೆ ಆಗಬಹುದಾದ ತೊಂದರೆಯು ಕಡಿಮೆಯಾಗುತ್ತದೆ. - ಎಳೆ ಮಗುವಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ