ಬೆಂಗಳೂರು : ಮೊಟ್ಟೆಯಿಂದ ನಾವು ನಾನಾ ರೀತಿಯ ಅಡುಗೆಗಳನ್ನು ಮಾಡಿಕೊಳ್ಳುತ್ತೇವೆ. ಅಲ್ಲದೆ ಮೊಟ್ಟೆಯನ್ನು ಬೇಯಿಸಿ ಸಹ ತಿನ್ನುತ್ತೇವೆ. ಆದರೆ ಇದ್ಯಾವುದೂ ಅಲ್ಲದೆ ಕೆಲವರು ಮೊಟ್ಟೆಯನ್ನು ಹಾಗೆಯೇ ಹೊಡೆದು ಹಸಿಯಾಗಿ ಕುಡಿಯುತ್ತಾರೆ.ಇದು ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಹಸಿಕೋಳಿ ಮೊಟ್ಟೆಯಲ್ಲಿ ಸಾಲ್ಮೋನೆಲ್ಲಾ ಎಂಬ ಒಂದು ವಿಧವಾದ ಬ್ಯಾಕ್ಟೀರಿಯಾ ಇರುತ್ತದೆ. ಇದು ಯಾವುದೇ ಮೊಟ್ಟೆಯಲ್ಲಾದರೂ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಮೊಟ್ಟೆಯನ್ನು ಬೇಯಿಸಿ, ಅಥವಾ ಪಲ್ಯ ಮಾಡಿಕೊಂಡು ತಿಂದರೆ ಆ ಬ್ಯಾಕ್ಟೀರಿಯಾ