ಹೆಚ್ಚು ನೀರು ಕುಡಿದರೆ ಹೆಚ್ಚು ಆರೋಗ್ಯವೆಂಬುದು ನಿಜವಾದರೂ ದಿನಕ್ಕೆ ಇಂತಿಷ್ಟು ನೀರು ಕುಡಿಯಬೇಕು ಎಂಬುದು ವಿಜ್ಞಾನದಲ್ಲಿ ತಿಳಿಸಿರುವ ಸಲಹೆಯಾಗಿದೆ. ಸಾಮಾಜಿಕ ತಾಣಗಳಲ್ಲಿ, ಸೆಲೆಬ್ರಿಟಿಗಳ ಜಾಹೀರಾತುಗಳಲ್ಲಿ ಹೀಗೆ ನೀರಿನ ಸೇವನೆಯ ಕುರಿತು ಹೆಚ್ಚಿನ ಬೋಧನೆಗಳನ್ನು ನಾವು ಪಡೆಯುತ್ತಲೇ ಇರುತ್ತವೆ. ದೇಹದ ಸ್ವಾಸ್ಥ್ಯಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಉತ್ತಮ ಎಂಬುದು ಸಲಹೆಯಾಗಿದ್ದರೂ ಈ ಸಾಕಷ್ಟು ಎಂಬುದು ಯಾವ ಅಂಶ ಆಧರಿಸಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಆರೋಗ್ಯವಾಗಿರಲು, ತ್ವಚೆಯ ಹೊಳಪು ಹೆಚ್ಚಿಸಲು, ಮಾನಸಿಕ