ಮೊಟ್ಟೆಯು ಹೇರಳವಾದ ಪ್ರೋಟಿನ್ ಮತ್ತು ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ. ಇನ್ನು ಪ್ರತಿ ಮೊಟ್ಟೆಯಲ್ಲಿ ಶೇ.6 ರಷ್ಟು ವಿಟಮಿನ್ ಎ, ವಿಟಮಿನ್ ಬಿ5 ಶೇ,7. ವಿಟಮಿನ್ ಬಿ12, ಶೇ15 ಹಾಗೂ ಪ್ರಾಸ್ಪರಸ್ ಶೇ9 ರಷ್ಟು ಇರುತ್ತದೆ. ಜೊತೆಗೆ ವಿಟಮಿನಿ ಇ. ಪಾಲಿಕ್ ಆಸಿಡ್, ಒಮೆಗಾ 3 ಸೇರಿದಂತೆ ಹಲವು ಅಂಶಗಳು ಮೊಟ್ಟೆಯಲ್ಲಿವೆ. ಹೀಗಾಗಿ ಮೊಟ್ಟೆ ಒಂದು ಪೂರ್ಣ ಪ್ರಮಾಣದ ಆಹಾರವಾಗಿದೆ.