ಬೆಂಗಳೂರು: ಯಾವುದೋ ಕಾರಣಕ್ಕೆ ಬೇರೆಯಾದ ಜೋಡಿ ಜೀವಗಳು ಮತ್ತೆ ಯಾವಾಗಲೋ ಒಂದಾಗಬೇಕೆಂದು ಬಯಸುವುದು ಇದೆ. ಸಿನಿಮಾಗಳಲ್ಲಿ ಇಂತಹ ಸಾಕಷ್ಟು ಸೀನ್ ನೋಡುತ್ತೇವೆ.ನಿಜ ಜೀವನದಲ್ಲೂ ಹಳೆಯ ಗೆಳೆಯ ಎಷ್ಟೋ ಸಮಯದ ನಂತರ ಮದುವೆಯಾಗುತ್ತೇನೆಂದು ಬಂದರೆ ಏನು ಮಾಡೋದು? ಅವನನ್ನು ಸ್ವೀಕರಿಸುವುದಾ? ಬೇಡವಾ ಎಂಬ ಗೊಂದಲ ಮನಸ್ಸಿಗೆ ಬರುತ್ತದೆ.ಮೊದಲಿಗೆ ಆತನಿಗೆ ತಕ್ಷಣವೇ ಒಪ್ಪಿಗೆ ಕೊಡಬೇಡಿ. ನಿಮಗೆ ಆತನೊಂದಿಗೆ ಸಂಬಂಧ ಮತ್ತೆ ಶುರು ಮಾಡಲು ಆತಂಕವೇನಾದರೂ ಇದ್ದರೆ ಅದನ್ನು ಹಂಚಿಕೊಳ್ಳಿ. ಅದಕ್ಕೆ ಸ್ಪಷ್ಟನೆ ಪಡೆಯಿರಿ.