ಬೆಂಗಳೂರು : ನಾನು 35 ವರ್ಷದ ಮಹಿಳೆ. ನನಗೆ 7 ಮತ್ತು 9 ವರ್ಷದ ಇಬ್ಬರು ಗಂಡುಮಕ್ಕಳಿದ್ದಾರೆ. ಅವರೊಂದಿಗೆ ದೇಹ ಮತ್ತು ಲೈಂಗಿಕತೆಯ ಬಗ್ಗೆ ನಾನು ಯಾವಾಗ ಚರ್ಚಿಸಬೇಕು ಎಂಬ ಚಿಂತೆ. ಮಕ್ಕಳು ತಮ್ಮ ದೇಹದ ಬಗ್ಗೆ ತಿಳಿಯುವ ಕುತೂಹಲ ಹೊಂದಿದ್ದಾರೆ. ಖಾಸಗಿ ಭಾಗಗಳ ಬಗ್ಗೆ ಅವರಿಗೆ ತಿಳಿಸುವಾಗ ಅಡ್ಡಹೆಸರುಗಳನ್ನು ಬಳಸುವುದು ಸರಿಯೇ? ಶಿಶುಗಳು ಎಲ್ಲಿಂದ ಬರುತ್ತಾರೆ ಎಂದು ಅವರು ಕೇಳುವ ಪ್ರಶ್ನೆಗೆ ಏನೆಂದು ಉತ್ತರಿಸಲಿ. ದಯವಿಟ್ಟು ನನಗೆ ಸಹಾಯ ಮಾಡಿ.