ತೂಕ ಇಳಿಕೆಗೆ ಇವೆರಡರಲ್ಲಿ ಯಾವುದು ಉತ್ತಮ?

ಮೈಸೂರು| Ramya kosira| Last Modified ಬುಧವಾರ, 3 ನವೆಂಬರ್ 2021 (13:40 IST)
ಇಂದು ಮಾರುಕಟ್ಟೆಯಲ್ಲಿ ದೊರಕುವ ತಂಪು ಪಾನೀಯಗಳೆಲ್ಲವೂ ಭಾರೀ ಮಟ್ಟದ ಸಕ್ಕರೆ ಹಾಗೂ ಕೃತಕ ರುಚಿಕಾರಕಗಳಿಂದ ತುಂಬಿರುವ ಅನಾರೋಗ್ಯಕರ ಪಾನೀಯಗಳೇ ಆಗಿವೆ.
ಇವುಗಳನ್ನು ಕುಡಿದರೆ ತಾತ್ಕಾಲಿಕವಾಗಿ ಆಹ್ಲಾದತೆ ದೊರಕಬಹುದೇ ಹೊರತು ಇವುಗಳ ದೀರ್ಘಕಾಲೀನ ಪರಿಣಾಮಗಳು ಮಾರಕವೇ ಆಗಿವೆ. ಬದಲಿಗೆ ಮನೆಯಲ್ಲಿಯೇ ತಯಾರಿಸಿದ ತಾಜಾ ಹಾಲಿನ ಛಾಚ್ (ಮಜ್ಜಿಗೆ) ಅಥವಾ ಲಸ್ಸಿ ಉತ್ತಮ ಆಯ್ಕೆಗಳಾಗಿವೆ. ಇವು ಆರೋಗ್ಯಕರ ಪಾನೀಯಗಳಾಗಿವೆ ಹಾಗೂ ಬೇಸಿಗೆಯ ಧಗೆಯನ್ನು ತಣಿಸಲು ಸಮರ್ಥವಾಗಿವೆ.
ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳು ತಮ್ಮ ಆಹಾರವನ್ನು ಜಾಣತನದಿಂದ ಆಯ್ದುಕೊಳ್ಳಬೇಕಾದುದರಿಂದ ಇವೆರಡರಲ್ಲಿ ಯಾವುದು ಉತ್ತಮ ಎಂಬ ಗೊಂದಲಕ್ಕೆ ಒಳಗಾಗಬಹುದು. ಇಂದಿನ ಲೇಖನದಲ್ಲಿ ಈ ದ್ವಂದ್ವವನ್ನು ನಿವಾರಿಸಲಾಗಿದೆ. ಹೇಗೆ ಎಂಬುದನ್ನು ನೋಡೋಣ
ಛಾಚ್ ಅಥವಾ ಮಜ್ಜಿಗೆ
ಇದು ತಂಪಾದ ಪಾನೀಯವಾಗಿದ್ದು ಬೇಸಿಗೆಯ ಸಮಯದಲ್ಲಿ ಸೇವಿಸಲು ಅತ್ಯುತ್ತಮವಾಗಿದೆ. ಆಯುರ್ವೇದವೂ ಛಾಚ್ ಅನ್ನು ಸಾತ್ವಿಕ ಆಹಾರ ಎಂದು ವರ್ಗೀಕರಿಸಿದೆ. ಛಾಚ್ ಸೇವನೆಯ ಮೂಲಕ ಆಮ್ಲೀಯತೆ ನಿವಾರಣೆಯಾಗುತ್ತದೆ ಹಾಗೂ ವಿಶೇಷವಾಗಿ ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಉರಿ ಎದುರಾಗದಂತೆ ಕಾಪಾಡುತ್ತದೆ.
ಜೊತೆಗೇ ಜೀರ್ಣಕ್ರಿಯೆ ಉತ್ತಮಗೊಳಿಸುವುದು, ಆಹಾರಕ್ಕೆ ಕ್ಯಾಲ್ಸಿಯಂ ಅಂಶವನ್ನು ನೀಡುವುದು, ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸುವುದು, ರಕ್ತದ ಒತ್ತಡವನ್ನು ತಗ್ಗಿಸುವುದು, ಕೆಲವಾರು ಬಗೆಯ ಕ್ಯಾನ್ಸರ್ ಗಳು ಎದುರಾಗದಂತೆ ರಕ್ಷಿಸುವುದು ಮೊದಲಾದ ಪ್ರಯೋಜನಗಳನ್ನೂ ನೀಡುತ್ತದೆ. ಅಲ್ಲದೇ ಇದರಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇರುವ ಕಾರಣ ತೂಕ ಇಳಿಕೆಯ ಪ್ರಯತ್ನವನ್ನೂ ಬೆಂಬಲಿಸುತ್ತದೆ.
ಲಸ್ಸಿಯ ಆರೋಗ್ಯಕರ ಪ್ರಯೋಜನಗಳು
ಲಸ್ಸಿ ಎಂದರೆ ಮೊಸರನ್ನು ಸಕ್ಕರೆ ಹಾಗೂ ಇತರ ಸುಗಂಧಗಳ ಜೊತೆಗೆ ನುಣ್ಣಗೆ ಕಡೆದು ನೊರೆಯಾಗಿಸಿ ಕುಡಿಯುವುದಾಗಿದೆ. ಕೆಲವೊಮ್ಮೆ ಕೊಂಚ ಉಪ್ಪನ್ನೂ ಬೆರೆಸಬಹುದು. ನಿಮ್ಮ ಆಯ್ಕೆಯ ಹಣ್ಣುಗಳ ತಿರುಳು, ಮೂಲಿಕೆಗಳು ಅಥವಾ ಪುದಿನಾ ಮೊದಲಾದ ಎಲೆಗಳನ್ನೂ ಹಾಕಿ ಕಡೆಯಬಹುದು.
ಈ ಮೂಲಕ ಲಸ್ಸಿಯ ರುಚಿ ಹಾಗೂ ಪೋಷಕಾಂಶಗಳ ಪ್ರಮಾಣವೂ ಹೆಚ್ಚುತ್ತದೆ. ಲಸ್ಸಿಯನ್ನು ಕೊಬ್ಬು ನಿವಾರಿಸದ ಮೊಸರಿನಿಂದ ತಯಾರಿಸುವ ಕಾರಣ ಒಂದು ದೊಡ್ಡ ಲೋಟ ಲಸ್ಸಿ ಕುಡಿದಾಗ ಹೊಟ್ಟೆ ತುಂಬುತ್ತದೆ. ಲಸ್ಸಿಯ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು, ಜಠರದ ಸಮಸ್ಯೆಗಳು ಬಾರದಂತೆ ತಡೆಯುವುದು ಜೀರ್ಣಾಂಗಗಳ ಕ್ಷಮತೆ ಹೆಚ್ಚುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು ಹಾಗೂ ಮೂಳೆಗಳ ಸಾಂದ್ರತೆಯೂ ಹೆಚ್ಚುವುದು ಮೊದಲಾದ ಪ್ರಯೋಜನಗಳನ್ನು ಪಡೆಯಬಹುದು.ಇದರಲ್ಲಿ ಇನ್ನಷ್ಟು ಓದಿ :