ಬೆಂಗಳೂರು: ನವಜಾತ ಶಿಶುಗಳಿಗೆ ಹಾಲುಡಿಸುವ ಅಮ್ಮಂದಿರಲ್ಲಿ ಸ್ತನಪಾನ ಮಾಡಿಸುವ ಭಂಗಿಯ ಬಗ್ಗೆ ಹಲವು ಗೊಂದಲಗಳಿರುತ್ತವೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಸಣ್ಣ ಪ್ರಯತ್ನ ಮಾಡೋಣ. ಬಾಣಂತಿಯರು ಮಗುವಿನ ಆರೈಕೆಗಾಗಿ ರಾತ್ರಿಯೂ ನಿದ್ರೆಗೆಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನಿದ್ರೆಯ ಅಮಲಿನಲ್ಲಿ ಎದ್ದು ಕೂರಲು ಉದಾಸೀನ ತೋರಿ ಮಲಗಿಕೊಂಡೇ ಸ್ತನ ಪಾನ ಮಾಡಿಸುತ್ತಾರೆ.ಆದರೆ ಹೀಗೆ ಮಾಡುವುದು ಮಗುವಿನ ದೃಷ್ಟಿಯಿಂದ ಅಪಾಯಕಾರಿ. ನವ ಜಾತ ಶಿಶುಗಳಿಗೆ ಇನ್ನೂ ಆಹಾರವನ್ನು ಬೇಕಷ್ಟೇ ಒಳಗೆ ತೆಗೆದುಕೊಳ್ಳುವ, ಮತ್ತು ಅದನ್ನು