ಬೆಂಗಳೂರು: ಮಹಿಳೆಯರಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಕೆಲವೊಮ್ಮೆ ಲೈಂಗಿಕ ಜೀವನಕ್ಕೂ ಅಡ್ಡಿಯಾಗಬಹುದು. ಕೆಟ್ಟ ವಾಸನೆಯೊಂದಿಗೆ ಬಿಳಿ ಸ್ರಾವವಾಗುತ್ತಿದ್ದರೆ ಗುಪ್ತಾಂಗವೂ ಕೆಟ್ಟ ವಾಸನೆ ಹೊಂದಿರುತ್ತದೆ.ಇದರಿಂದ ಲೈಂಗಿಕ ಕ್ರಿಯೆ ನಡೆಸಲು ಸಂಗಾತಿಗೆ ಇಷ್ಟವಾಗದೇ ಇರಬಹುದು. ಆದರೆ ಈ ಬಿಳಿಮುಟ್ಟು ಅಸಹಜವಾಗಿ ಆಗುತ್ತಿದ್ದರೆ ಏನು ಮಾಡೋದು?ಗುಪ್ತಾಂಗದಲ್ಲಿ ಸೋಂಕು, ಶುಚಿತ್ವ ಇಲ್ಲದೇ ಇದ್ದಾಗ ಅಧಿಕ ಬಿಳಿಮುಟ್ಟಿನ ಸಮಸ್ಯೆ ಕಂಡುಬರಬಹುದು. ಅಂತಹ ಸಂದರ್ಭದಲ್ಲಿ ಸೋಂಕು ನಿವಾರಣೆಗೆ ತಕ್ಕ ಮದ್ದು ಮಾಡುವುದು ಉತ್ತಮ. ಹಾಗೆಯೇ ಆದಷ್ಟು ಜನನಾಂಗದ ಶುಚಿತ್ವದ