ಬೆಂಗಳೂರು: ಪುರುಷರಲ್ಲಿ ಲೈಂಗಿಕ ನಿರಾಸಕ್ತಿಗೆ ಹಲವು ಕಾರಣಗಳಿರಬಹುದು. ಮೂಡ್ ಬದಲಾವಣೆ ಅಥವಾ ಇನ್ನು ಹಲವು ಕಾರಣಗಳಿಂದ ಪುರುಷರು ಸೆಕ್ಸ್ ನಿಂದ ವಿಮುಖರಾಗಬಹುದು. ಆ ಕಾರಣಗಳು ಯಾವುವು ನೋಡೋಣ. ಒತ್ತಡ ಮನಸ್ಸು ಒತ್ತಡದಲ್ಲಿದ್ದರೆ ಏನೂ ಬೇಡವೆನಿಸುವುದು ಸಹಜ. ಒತ್ತಡ ಮಾನಸಿಕ ಮಾತ್ರವಲ್ಲ, ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚು ಒತ್ತಡಕ್ಕೊಳಗಾಗಿದ್ದರೆ, ಮನಸ್ಸು ಖಿನ್ನವಾಗುತ್ತದೆ, ಸೆಕ್ಸ್ ಬೇಡವೆನಿಸುತ್ತದೆ.ಆತ್ಮವಿಶ್ವಾಸದ ಕೊರತೆ ಆತ್ಮ ವಿಶ್ವಾಸ ಕುಂದಿದೆ ಎಂದಾದರೆ ನಮ್ಮಲ್ಲೇ ಒಂದು ಕೀಳರಿಮೆ ಹುಟ್ಟಿಕೊಳ್ಳುತ್ತದೆ.