ಬೆಂಗಳೂರು: ಬೆಳಗಿನ ಉಪಾಹಾರ ಎನ್ನುವುದು ಮನುಷ್ಯನಿಗೆ ತುಂಬಾ ಮುಖ್ಯ. ಬೆಳಗ್ಗೆ ಏನು ತಿನ್ನುವುದರ ಮೇಲೆ ನಮ್ಮ ದೈನಂದಿನ ಆರೋಗ್ಯ ನಿಂತಿದೆ. ಬೆಳಗ್ಗೆ ಏನೂ ತಿಂಡಿ ಮಾಡಿಲ್ಲವೆಂದರೆ ಪಕ್ಕನೆ ತಿನನ್ನಲು ನೆನಪಾಗುವುದೇ ಬಾಳೆಹಣ್ಣು. ಆದರೆ ಬಾಳೆಹಣ್ಣನ್ನು ಉಪಾಹಾರಕ್ಕೆ ಬಳಸಬಾರದು. ಅದರಿಂದ ಆರೋಗ್ಯದ ಮೇಲೆ ಹಲವು ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ದೇಹದಲ್ಲಿ ಬೇಗನೆ ಹೆಚ್ಚುವಂತೆ ಮಾಡುತ್ತದೆ. ಅದೇ ರೀತಿ ಬೇಗನೇ ಸಕ್ಕರೆ ಅಂಶ ಕರಗಲು ಖಾರಣವಾಗುತ್ತದೆ.