ಬೆಂಗಳೂರು: ಶುಭ ಕಾರ್ಯಕ್ಕೆ ಹೊರಡುವಾಗ ಸಕ್ಕರೆ ಮತ್ತು ಮೊಸರು ಸೇವಿಸಿದರೆ ಕೈಗೊಂಡ ಕೆಲಸಗಳು ನೆರವೇರುತ್ತವೆ, ಶುಭವಾಗುತ್ತದೆ ಎಂಬ ನಂಬಿಕೆಯಿದೆ.ಇದು ಕೇವಲ ನಂಬಿಕೆ ಮಾತ್ರವಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ಎಂದರೆ ನೀವು ನಂಬಲೇ ಬೇಕು. ಭಾರತೀಯರ ಈ ಸಂಪ್ರದಾಯ ದೇಹಕ್ಕೂ ಒಳ್ಳೆಯದನ್ನು ಮಾಡುತ್ತದೆ.ಮೊಸರು ಮತ್ತು ಸಕ್ಕರೆಯನ್ನು ಜತೆಯಾಗಿ ಸೇವಿಸುವುದರಿಂದ ದೇಹ ಲವಲವಿಕೆಯಿಂದಿರಲು ಬೇಕಾದ ಪೋಷಕಾಂಶ ಸಿಗುತ್ತದೆ. ಅಲ್ಲದೆ ಹೆಚ್ಚು ಹೊತ್ತು ಹಸಿವು ಇಂಗಿಸುತ್ತದೆ. ಜೀರ್ಣಕ್ರಿಯೆಗೂ ಸಹಕರಿಸುತ್ತದೆ. ಪರೀಕ್ಷೆ, ಸಂದರ್ಶನಕ್ಕೆ