ಬೆಂಗಳೂರು: ಹೆಣ್ಣುಮಕ್ಕಳಿಗೆ ಇದೊಂದು ಸಮಸ್ಯೆ. ಆ ದಿನ ಯಾವಾಗ ಬರುತ್ತದೋ ಎನ್ನುವ ಹೇಳಲಾಗದ ಚಡಪಡಿಕೆ. ಕೆಲವೊಮ್ಮೆ ನಿಗದಿತ ದಿನಕ್ಕಿಂತಲೂ ಋತುಸ್ರಾವ ತಡವಾಗವುದೇಕೆ ಎನ್ನುವುದಕ್ಕೆ ಹಲವು ಕಾರಣಗಳು. ಒತ್ತಡ: ಒತ್ತಡ ನಮ್ಮ ದೇಹದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರಲ್ಲಿ ಇದೂ ಒಂದು. ಒತ್ತಡದಿಂದಾಗಿ ನಮ್ಮ ದೇಹದಲ್ಲಿ ಜಿಎನ್ ಆರ್ ಎಚ್ ಎನ್ನುವ ಹಾರ್ಮೋನ್ ಉತ್ಪಾದನೆ ಕುಂಠಿತವಾಗುತ್ತದೆ. ಇದರಿಂದ ಮುಟ್ಟು ತಡವಾಗುತ್ತದೆ. ಅನಾರೋಗ್ಯ: ಶೀತ, ಕೆಮ್ಮು, ಜ್ವರದಂತಹ ಸಾಮಾನ್ಯ ರೋಗಗಳು