ಬೆಂಗಳೂರು: ಸಂಕ್ರಾಂತಿ ಬಂದರೆ ಸಾಕು. ಎಲ್ಲಿ ನೋಡಿದರಲ್ಲಿ ಕಬ್ಬಿನ ರಾಶಿ. ಎಳ್ಳು ಬೆಲ್ಲದ ಜತೆ ಕಬ್ಬಿನ ತುಂಡು ನೀಡುವುದು ಕೇವಲ ಸಂಪ್ರದಾಯ ಮಾತ್ರವಲ್ಲ.ಅದರಲ್ಲಿ ಆರೋಗ್ಯದ ಭಂಡಾರವೇ ಇದೆ. ಕಬ್ಬು ಅಥವಾ ಕಬ್ಬಿನ ಹಾಲು ಕುಡಿಯುವುದರಿಂದ ನಮಗೆ ಸಿಗುವ ಆರೋಗ್ಯಕರ ಲಾಭಗಳು ಯಾವುವು ನೋಡೋಣ. ಕಬ್ಬಿನ ರಸದಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿ, ಕಾರ್ಬೋ ಹೈಡ್ರೇಟ್, ವಿಟಮಿನ್, ಕ್ಯಾಲ್ಶಿಯಂ, ಕಬ್ಬಿಣದಂಶ, ಪೊಟೇಶಿಯಂ ಮತ್ತು ಸೋಡಿಯಂನ ಅಂಶಗಳು ಹೇರಳವಾಗಿದೆ. ಇದು ಶಕ್ತಿ ವರ್ಧಕ