ಬೆಂಗಳೂರು: ತುಳಸಿ ಎನ್ನುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸಸ್ಯ ಸಂಪತ್ತು. ಧಾರ್ಮಿಕ ಮತ್ತು ಆರೋಗ್ಯದ ಹಿನ್ನಲೆಯಲ್ಲಿ ತುಳಸಿ ನಮಗೆ ಅತ್ಯಂತ ಪ್ರಮುಖವಾಗಿದೆ. ತುಳಸಿಯನ್ನು ಪೂಜೆಗೆ ಬಳಸುವುದಲ್ಲದೆ, ಶೀತ, ಕೆಮ್ಮುವಿನಂತಹ ಸಮಸ್ಯೆಗೂ ಬಳಸುತ್ತೇವೆ. ಅಪಾರ ಔಷಧೀಯ ಗುಣವಿರುವ ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಆದರೆ ತುಳಸಿಯನ್ನು ಜಗಿದು ನುಂಗಬಾರದು!ಧಾರ್ಮಿಕ ಹಿನ್ನೆಯಲ್ಲಿ ನೋಡುವುದಾದರೆ, ತುಳಸಿ ಗಿಡದಲ್ಲಿ ಭಗವಾನ್ ಮಹಾ ವಿಷ್ಣು ಪತ್ನಿ ಸಮೇತ ನೆಲೆಸಿದ್ದಾನೆ ಎಂಬ ನಂಬಿಕೆಯಿದೆ.