ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಾಗ ಮಹಿಳೆಯರಿಗೆ ಕೆಲವೊಮ್ಮೆ ರಕ್ತಸ್ರಾವವಾಗುವುದು ಸಹಜ. ಆದರೆ ಪ್ರತೀ ಬಾರಿಯೂ ಹೀಗಾಗುತ್ತಿದ್ದರೆ ಅದನ್ನು ಎಚ್ಚರಿಕೆಯ ಕರೆಗಂಟೆ ಎಂದು ಪರಿಗಣಿಸಬಹುದು.ಈ ರೀತಿ ರಕ್ತಸ್ರಾವವಾಗುವುದಕ್ಕೆ ಅನೇಕ ಕಾರಣಗಳಿವೆ. ಗುಪ್ತಾಂಗದಲ್ಲಿ ಗಾಯ, ಗರ್ಭನಾಳದಲ್ಲಿ ತೊಂದರೆಯಿದ್ದರೆ, ಒಣ ಯೋನಿಯಾಗಿದ್ದರೆ, ಅಥವಾ ಗರ್ಭಾಶಯದಲ್ಲಿ ಇನ್ಯಾವುದೇ ಸಮಸ್ಯೆಯಿದ್ದಾಗ ಈ ರೀತಿ ಪ್ರತೀ ಬಾರಿ ರಕ್ತಸ್ರಾವವಾಗಲು ಕಾರಣವಾಗುತ್ತದೆ.ಅಷ್ಟೇ ಅಲ್ಲ, ಇದು ಕ್ಯಾನ್ಸರ್ ನ ಲಕ್ಷಣವೂ ಆಗಿರಬಹುದು. ಹೀಗಾಗಿ ಮಿಲನದ ಬಳಿಕ ರಕ್ತಸ್ರಾವವಾಗುತ್ತಿದ್ದರೆ ಅದನ್ನು