ಬೆಂಗಳೂರು: ಪತ್ನಿ ಮೇಲೆ ಪತಿ ಕೈ ಮಾಡುವ ಘಟನೆಗಳು ಸಾಕಷ್ಟು ವರದಿಯಾಗುತ್ತವೆ. ಅದೇ ರೀತಿ ಪತ್ನಿಯರೂ ಪತಿ ಮೇಲೆ ದೈಹಿಕವಾಗಿ ಹೊಡೆದು ಬಡಿದು ಮಾಡುವಂತಹ ಘಟನೆಗಳೂ ಕೆಲವೊಂದು ಮನೆಯಲ್ಲಿ ನಡೆಯುತ್ತದೆ.ಆದರೆ ಮಕ್ಕಳ ಕಾರಣಕ್ಕೋ, ಸಮಾಜಕ್ಕೆ ಹೆದರಿಯೋ ಪುರುಷರೂ ಕೆಲವೊಮ್ಮೆ ಪತ್ನಿಗೆ ವಿಚ್ಛೇದನ ನೀಡಲಾರದೆ, ಹಿಂಸೆ ಅನುಭವಿಸಲೂ ಆಗದೇ ಕೊರಗುವುದಿದೆ.ಇಂತಹ ಸಂದರ್ಭದಲ್ಲಿ ಹಿರಿಯರ ಮೂಲಕ ಮಾತುಕತೆ ನಡೆಸಿ, ಅಥವಾ ಪತಿ-ಪತ್ನಿಯರೇ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಅದು ಸಾಧ್ಯವೇ ಆಗದಿದ್ದರೆ ಕೆಲವೊಂದು