ಬೆಂಗಳೂರು: ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಅತಿಯಾದ ಹೊಟ್ಟೆ ನೋವು, ಕಾಲು ನೋವು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಾರೆ.ಅದಕ್ಕೆ ಕಾರಣಗಳು ಹಲವಾರು ಇರಬಹುದು. ತಜ್ಞ ವೈದ್ಯರನ್ನು ಕೆಲವೊಮ್ಮೆ ಈ ಸಮಸ್ಯೆಗೆ ಹೆರಿಗೆ ನಂತರ ಪರಿಹಾರ ಸಿಗುತ್ತದೆ ಅಂತಾರೆ. ನಿಜವಾಗಿಯೂ ಹೆರಿಗೆ ನಂತರ ಹೊಟ್ಟೆ ನೋವು ಕಡಿಮೆಯಾಗುತ್ತದೆಯೇ?ಒಂದು ವೇಳೆ ಗರ್ಭನಾಳ ಸಂಕುಚಿತವಾಗಿರುವುದರಿಂದ ಈ ರೀತಿಯ ಹೊಟ್ಟೆ ನೋವು ಬರುತ್ತಿದ್ದರೆ ಹೆರಿಗೆ ನಂತರ ನೋವು ಉಪಶಮನವಾಗಬಹುದು. ಆದರೆ ಸಮಸ್ಯೆಗೆ ನಿಜವಾದ ಕಾರಣವೇನು ಎಂದು ಪರೀಕ್ಷಿಸಿಯೇ ತಿಳಿಯಬೇಕು.