ಬೆಂಗಳೂರು: ಮಹಿಳೆಯರು ತಮ್ಮ ಗುಟ್ಟಿನ ಸಂಗತಿಗಳನ್ನು ಹೆಚ್ಚು ಹಂಚಿಕೊಳ್ಳುವುದು ಗಂಡನ ಬಳಿ ಎಂದು ನೀವಂದುಕೊಂಡರೆ ತಪ್ಪು. ಆಕೆ ಹೆಚ್ಚು ವಿಚಾರಗಳನ್ನು ಗಂಡನಿಗಿಂತ ಸ್ನೇಹಿತರಲ್ಲೇ ಹಂಚಿಕೊಳ್ಳುತ್ತಾಳಂತೆ! ಹಾಗಂತ ಸಂಶೋಧನಾ ವರದಿಯೊಂದು ಹೇಳಿದೆ.ಹೆಲ್ತ್ ಕೇರ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಯಲಾಗಿದೆ. ಸುಮಾರು 1500 ಕ್ಕೂ ಹೆಚ್ಚು ಮಹಿಳೆಯರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಮಹಿಳೆಯರಿಗೆ ತಮ್ಮ ಲವ್ ಲೈಫ್, ಸಂಬಂಧಗಳ ಕುರಿತಾದ ಗುಟ್ಟುಗಳನ್ನು ಯಾರ ಬಳಿ ಹೆಚ್ಚು ಹಂಚಿಕೊಳ್ಳುತ್ತೀರಿ ಎಂದು