ಬೆಂಗಳೂರು: ಮದುವೆಯಾಗುವ ಹುಡುಗನ ಬಗ್ಗೆ ಎಲ್ಲಾ ಹುಡುಗಿಯರು ಸಾವಿರಾರು ಕನಸು ಕಟ್ಟಿಕೊಂಡಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಇಂದಿನ ಯುವತಿಯರು ತಮ್ಮ ಸಂಗಾತಿಯಿಂದ ನಿರೀಕ್ಷೆ ಮಾಡುವುದು ಏನನ್ನು ಎಂಬ ಬಗ್ಗೆ ವೈವಾಹಿಕ ವೆಬ್ ಸೈಟ್ ನಡೆಸಿದ ಸಮೀಕ್ಷೆಯಿಂದ ಒಂದು ವಿಚಾರ ಬೆಳಕಿಗೆ ಬಂದಿದೆ.ಭಾರತ್ ಮ್ಯಾಟ್ರಿಮೋನಿಯಲ್ ಸೈಟ್ ಮಹಿಳೆಯರು ತಮ್ಮ ಸಂಗಾತಿ ಬಳಿಯಲ್ಲಿ ಏನನ್ನು ನಿರೀಕ್ಷೆ ಮಾಡುತ್ತಾರೆ ಎಂದು ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 44 ಮಹಿಳೆಯರು ತಾವು ಸಂಗಾತಿಯಿಂದ ಸಮಾನತೆ ನಿರೀಕ್ಷಿಸುತ್ತೇವೆ