ನವದೆಹಲಿ: ನಮ್ಮಲ್ಲಿ ತಮಾಷೆಗೆ ಪತಿಗಿಂತ ಪತಿಯೇ ಹೆಚ್ಚು ಆಯಸ್ಸು ಹೊಂದಿರುತ್ತಾಳೆ ಎನ್ನುತ್ತಾರೆ. ಆದರೆ ಇದು ನಿಜವಂತೆ! ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಆಯಸ್ಸು. ಅದಕ್ಕೆ ಕಾರಣವನ್ನೂ ಸಂಶೋಧಕರು ನೀಡಿದ್ದಾರೆ. ಅಧ್ಯಯನವೊಂದರ ಪ್ರಕಾರ ಮಹಿಳೆಯರು ಪುರುಷರಿಗೆ ಹೋಲಿಸಿದರೆ ಜೈವಿಕವಾಗಿ ಹೆಚ್ಚು ಸದೃಢರಾಗಿರುತ್ತಾರೆ. ಸಾಮಾನ್ಯ ನೋವು, ಮಾನಸಿಕವಾಗಿ ಕಠಿಣ ಪರಿಸ್ಥಿತಿಗಳಲ್ಲೂ ಮಹಿಳೆಯರು ಪುರುಷರಿಗಿಂತ ಸ್ಟ್ರಾಂಗ್ ಆಗಿರ್ತಾರೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.ನವಜಾತ ಶಿಶುಗಳ ಮರಣ ವಿಚಾರದಲ್ಲೂ ಹೆಣ್ಣು ಮಗು ಗಂಡು ಮಕ್ಕಳಿಗೆ ಹೋಲಿಸಿದರೆ ಹೆಚ್ಚು