ಬೆಂಗಳೂರು: ಮಹಿಳೆಯರೇ.. ಇನ್ನು ಮುಂದೆ ಪ್ರತಿ ನಿತ್ಯ ರಾತ್ರಿ 9 ಗಂಟೆಯೊಳಗೆ ಊಟ ಮುಗಿಸಿ. ಇದರಿಂದ ನಿಮಗೆ ಬರಬಹುದಾದ ಗಂಭೀರ ಖಾಯಿಲೆಯೊಂದರಿಂದ ದೂರವಿರಬಹುದು.ಇಂಟರ್ನಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಸಾರಗೊಂಡ ವರದಿ ಪ್ರಕಾರ ರಾತ್ರಿ 9 ರೊಳಗೆ ಊಟ ಮುಗಿಸುವ ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಂತೆ.621 ಮಂದಿ ಗರ್ಭಾಶಯ ಕ್ಯಾನ್ಸರ್ ಇರುವ ರೋಗಿಗಳು ಮತ್ತು 1205 ಸ್ತನ ಕ್ಯಾನ್ಸರ್ ಇರುವ ರೋಗಿಗಳ ಮೇಲೆ ಅಧ್ಯಯನ