ಬ್ಯೂಟಿ ಪಾರ್ಲರ್ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳೋದು ರಗಳೆ ಕೆಲಸ, ಒಂದೋ ಅಲ್ಲಿ ಗಂಟೆ ಗಟ್ಟಲೆ ಕಾಯಬೇಕು ಇಲ್ಲವೇ, ಅವರ ಸಮಯಕ್ಕೆ ಸರಿಯಾಗಿ ನಾವು ಹೋಗಬೇಕು ಎಂದೆಲ್ಲ ನಿಮಗೆ ಅನಿಸುತ್ತಿದ್ದರೆ, ಯಾಕೆ ಬೇಸರ ಮಾಡಿಕೊಳ್ಳುತ್ತೀರಿ ಹೇಳಿ? ಅಡುಗೆ ಮನೆಯಲ್ಲೇ ಹಲವಾರು ನೈಸರ್ಗಿಕ ಕೊಡುಗೆಗಳು ನಿಮಗಾಗಿ ಕಾದಿವೆ. ಸ್ವಲ್ಪವೇ ಸ್ವಲ್ಪ ಬಿಡುವು ಮಾಡಿಕೊಂಡು, ನಿಮ್ಮ ಚರ್ಮ ಯಾವ ಮಾದರಿಯದ್ದು ಎಂದು ತಿಳಿದುಕೊಂಡು ಚರ್ಮಕ್ಕೆ ಹೊಂದುವಂಥ ಆಯ್ಕೆಯನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು. ಸಾಮಾನ್ಯ ತ್ವಚೆಗೆ