ಬೆಂಗಳೂರು: ಬೇಸಿಗೆಯಲ್ಲಿ ದೇಹಕ್ಕೆ ನೀರಿನಂಶ ಎಷ್ಟು ನೀಡಿದರೂ ಕಡಿಮೆಯೇ. ಸುಡುವ ಬಿಸಿಲಿಗೆ ದೇಹ ನಿರ್ಜಲೀಕರಣಕ್ಕೊಳಗಾಗುವುದು ಬೇಗ. ಹಾಗಾಗದಂತೆ ತಡೆಯಲು ಯಾವ ತರಕಾರಿ ತಿನ್ನಬೇಕು ನೋಡಿಕೊಳ್ಳಿ. ಸೋರೆಕಾಯಿಸೋರೆಕಾಯಿಯಲ್ಲಿ ಶೇಕಡಾ 90 ರಷ್ಟು ನೀರಿನಂಶವಿದೆ. ಆದಷ್ಟು ಇದರ ಜ್ಯೂಸ್ ಮಾಡಿ ಕುಡಿಯುವುದು ದೇಹಕ್ಕೆ ತಂಪು ನೀಡುವುದಲ್ಲದೆ, ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಜತೆಗೆ ಇದು ತೂಕ ಇಳಿಸಲೂ ಸಹಾಯ ಮಾಡುತ್ತದೆ. ಸೊಪ್ಪು ತರಕಾರಿಗಳುಸೊಪ್ಪು ತರಕಾರಿಗಳು ಹೆಚ್ಚು ಶೀತ ಗುಣವನ್ನು ಹೊಂದಿದೆ. ಉಷ್ಣ ಹವೆಗೆ ಶೈತ್ಯ ತರಕಾರಿಗಳ