ಹೋಳಿ ಹಾಗೂ ಬಣ್ಣದ ಓಕಳಿ ಹಬ್ಬವನ್ನು ಪ್ರತಿವರ್ಷ ಅದ್ದೂರಿ ಹಾಗೂ ತುಂಬಾ ಸಂಭ್ರಮ ಸಡಗರದ ಮಧ್ಯೆ ಆಚರಿಸುತ್ತ ಬರಲಾಗುತ್ತಿದ್ದು, ಈ ವರ್ಷ ಪ್ರತಿವರ್ಷದ ಸಂಭ್ರಮ ಅದ್ದರೂರಿಯ ರಂಗು ಕಳೆದುಕೊಂಡಿದೆ. ಕೋವಿಡ್-19 ಸೋಂಕಿನ ಭೀತಿ ಬೆಳಗಾವಿಯಲ್ಲಿ ಆವರಿಸಿರುವುದರಿಂದ ಮತ್ತು ಜಿಲ್ಲಾ ಆಡಳಿತ ಇದೇ ಕಾರಣಕ್ಕೆ ಸರಳವಾಗಿ ಹಬ್ಬವನ್ನು ಆಚರಿಸಲು ಕರೆ ನೀಡಿರುವುದರಿಂದ ಅದ್ದೂರಿ ಆಚರಣೆಗೆ ತೆರೆಬಿದ್ದಿದೆ.ಮಧ್ಯರಾತ್ರಿ ಕಾಮದಹನ ಹಾಗೂ ಮರುದಿನ ಓಕಳಿ ಬಣ್ಣದಾಟ ನಿಗದಿಯಾಗಿತ್ತಾದರೂ ಪ್ರಾಣಕ್ಕೆ ಮಾರಕವಾಗಬಲ್ಲ ಸೋಂಕಿನ ಭಯದಿಂದ ಸಾರ್ವಜನಿಕರು