ಹೋಳಿ ಹಬ್ಬದಲ್ಲಿ ಬಣ್ಣದ ಓಕುಳಿ ಆಡಿ ಅಲರ್ಜಿಯಾಗದಂತೆ ತಡೆಯಲು ಹೀಗೆ ಮಾಡಿ

ಬೆಂಗಳೂರು| Krishnaveni K| Last Updated: ಸೋಮವಾರ, 9 ಮಾರ್ಚ್ 2020 (18:18 IST)
ಬೆಂಗಳೂರು: ಇನ್ನೇನು ಬಂದೇ ಬಿಡ್ತು. ಸೋಮವಾರ ಅಂದರೆ ಮಾರ್ಚ್ 9 ರಂದು ಹೋಳಿ ಹಬ್ಬವಿದ್ದು ಎಲ್ಲರೂ ಬಣ್ಣದ ಓಕುಳಿ ಆಡಿ ಸಂಭ್ರಮಾಚರಿಸುವುದು ಮಾಮೂಲು. ಆದರೆ ಬಣ್ಣದ ನೀರು ಕೆಲವರಿಗೆ ಅಲರ್ಜಿ ತರುತ್ತದೆ. ಹೀಗಾಗಿ ಓಕುಳಿ ಆಡಿದ ಬಳಿಕ ಕೆಲವೊಂದು ಟಿಪ್ಸ್ ಪಾಲಿಸಿದರೆ ಚರ್ಮದ ಅಲರ್ಜಿ ತಡೆಯಬಹುದು.

 
  • ಆದಷ್ಟು ರಾಸಾಯನಿಕ ಬಣ್ಣ ಬಳಸಬೇಡಿ
  • ಹೋಳಿ ಆಡಿದ ಬಳಿಕ ಹರಿಯುವ ನೀರಿನಲ್ಲಿ ಸುಮಾರು 10 ನಿಮಿಷ ಮೈಯೊಡ್ಡಿ ಚೆನ್ನಾಗಿ ತೊಳೆದುಕೊಳ್ಳಿ.
  • ಹೋಳಿಯ ನಂತರ ಸ್ನಾನ ಮಾಡುವಾಗ ತೇವಾಂಶಭರಿತ ಸಾಬೂನು ಬಳಸಿ.
  • ಮುಖಕ್ಕೆ ಗುಣಮಟ್ಟದ ಫೇಸ್ ವಾಶ್ ಬಳಸಿ ಶುಚಿಗೊಳಿಸಿ. ಆದಷ್ಟು ಶುಚಿಗೊಳಿಸುವಾಗ ಮೃದುವಾಗಿ ಉಜ್ಜಿಕೊಳ್ಳಿ.
  • ತಲೆಕೂದಲಿಗೆ ಶಾಂಪೂ ಬಳಸಿ ಬಳಿಕ ಕಂಡೀಷನರ್ ಬಳಸಿ.
  • ಸ್ನಾನದ ಬಳಿಕ ಕೂದಲಿಗೆ ಕಲರ್ ಪ್ರೊಟೆಕ್ಟ್ ಕಂಡೀಷನರ್ ಬಳಸಿ. ಸ್ನಾನದ ಬಳಿಕ ಮೈಗೆ ಯಾವುದಾದರೂ ತೇವಾಂಶ ಭರಿತ ಬಾಡಿ ಲೋಷನ್ ಅಥವಾ ಕೊಬ್ಬರಿ ಎಣ್ಣೆ ಬಳಸಿ.
ಇದರಲ್ಲಿ ಇನ್ನಷ್ಟು ಓದಿ :