ಮುಂಬೈ: ಬಾಲಿವುಡ್ ಮತ್ತು ಹಾಲಿವುಡ್ ತಾರೆಯಾಗಿ ಮಿನುಗುತ್ತಿರುವ ದೀಪಿಕಾ ಪಡುಕೋಣೆಗೆ ಇಂದು 32ನೇ ಜನ್ಮದಿನ. ಜನವರಿ 5, 1986 ರಂದು ಭಾರತದ ಪ್ರಭಾವಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಮತ್ತು ಉಜ್ಜಲಾ ಅವರ ಮುದ್ದಿನ ಮಗಳಾಗಿ ಜನ್ಮಿಸಿರುವ ಇವರಿಗೆ ಅನಿಶಾ ಎನ್ನುವ ತಂಗಿಯೊಬ್ಬಳಿದ್ದು ಅವರು ಗಾಲ್ಫ್ ಆಟಗಾರ್ತಿ. ದೀಪಿಕಾ ಚಿಕ್ಕವಳಿರುವಾಗ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು ನಂತರ ಮಾಡಲಿಂಗ್ ಕ್ಷೇತ್ರಕ್ಕೆ ಬಂದು ಈಗ ಬಾಲಿವುಡ್ ತಾರೆಯಾಗಿ ಮಿಂಚುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.