ಇಂದೋರಿನ ಖಜ್ರಾನಾ ಗಣೇಶ

WDWD
ऊँ ಗಂ ಗಣಪತಯೇ ನಮೋ ನಮಃ
ಸಿದ್ಧಿ ವಿನಾಯಕಾಯ ನಮೋ ನಮಃ
ಅಷ್ಟ ವಿನಾಯಕಾಯ ನಮೋ ನಮಃ ಗಣಪತಿ ಬಪ್ಪಾ ಮೋರಿಯಾ...

ನಾವೆಲ್ಲರೂ ಗಣೇಶೋತ್ಸವವನ್ನು ಆಚರಿಸಿದ್ದೇವೆ. ಇಡೀ ದೇಶವೇ ಗಣಪನ ಜನ್ಮದಿನದ ಆಚರಣೆಯ ಸಡಗರದಲ್ಲಿದೆ. ಗಣೇಶೋತ್ಸವದ ಈ ಪರ್ವಕಾಲದಲ್ಲಿ ನಾವು ಅತ್ಯಂತ ಪುರಾತನವಾದ ಮತ್ತು ಅಷ್ಟೇ ಪರಮ ಪವಿತ್ರ ಕ್ಷೇತ್ರ ಖಜ್ರಾನಾ ಮಂದಿರವನ್ನು ಪರಿಚಯಿಸಲಿದ್ದೇವೆ. ಈ ದೇವಸ್ಥಾನವನ್ನು ಕ್ರಿ.ಶ. 1735ರಲ್ಲಿ ಕಟ್ಟಲಾಗಿತ್ತು.

WDWD
ಮಂಗಲನಾಥ್ ಎನ್ನುವ ಅರ್ಚಕರು ಪ್ರತಿನಿತ್ಯ ಸ್ವಪ್ನಗಳನ್ನು ಕಾಣುತ್ತಿದ್ದರು. ಸ್ವಪ್ನದಲ್ಲಿ ದೇವರು ಪ್ರತ್ಯಕ್ಷನಾಗಿ ತಾನು ಸೂಚಿಸಿದ ಸ್ಥಳವನ್ನು ಅಗೆಯುವಂತೆ ಸೂಚನೆ ನೀಡಿದ್ದನಂತೆ.ಆ ಬಳಿಕ ಒಂದು ದಿನ ಅರ್ಚಕರು ರಾಣಿ ಅಹಲ್ಯಾ ಅವರ ಅರಮನೆಯ ನ್ಯಾಯ ಸಭಾಂಗಣಕ್ಕೆ ತೆರಳಿ ತಾನು ಕಂಡ ಸ್ವಪ್ನದ ಬಗ್ಗೆ ತಿಳಿಸಿದ್ದರು.

ರಾಣಿ ಅಹಲ್ಯಾ ಕೂಡಲೇ ಅರ್ಚಕರು ಸ್ವಪ್ನದಲ್ಲಿ ಕಂಡ ಸ್ಥಳವನ್ನು ಅಗೆಯುವಂತೆ ತನ್ನ ಸೇವಕರಿಗೆ ಆದೇಶಿಸಿದಳು.ಸೈನಿಕರು ಸ್ಥಳವನ್ನು ಅಗೆಯುತ್ತಿದ್ದಂತೆ ಗಣೇಶ ದೇವರ ಮೂರ್ತಿ ಕಂಡುಬಂದಿತು. ಈ ಮೂರ್ತಿಯನ್ನು ಖಜ್ರಾನಾ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು ಎಂಬುದು ಸ್ಥಳ ಪುರಾಣ.

ಗಣೇಶ ಮೂರ್ತಿಯನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಿದ ಕೂಡಲೇ ಖಜ್ರಾನಾ ಮಂದಿರ ಎಲ್ಲಾ ಕಡೆ ಪ್ರಖ್ಯಾತಗೊಂಡಿತು. ಈ ದೇವಾಲಯಕ್ಕೆ ಸ್ವತಃ ಗಣೇಶ ದೇವರ ಆಶೀರ್ವಾದವಿರುವುದರಿಂದ ಎಲ್ಲ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿ ನೆಲೆ ನಿಂತಿದೆ.

ಖಜ್ರಾನಾ ಮಂದಿರದಲ್ಲಿ ಭಕ್ತರು ಭಕ್ತಿ ಮತ್ತು ಶ್ರದ್ಧೆಯಿಂದ ಮಂದಿರದಲ್ಲಿರುವ ಸ್ಥಳಕ್ಕೆ ದಾರವನ್ನು ಕಟ್ಟಿ ಬೇಡಿಕೊಂಡಲ್ಲಿ ಖಂಡಿತವಾಗಿ ಅವರ ಬೇಡಿಕೆಗಳು ಈಡೇರುತ್ತವೆ. ಬೇಡಿಕೆಗಳು ಈಡೇರಿದ ನಂತರ ತಾವು ಕಟ್ಟಿದ ದಾರವನ್ನು ಬಿಚ್ಚಬಹುದು.
ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ತೀರ್ಥಕ್ಷೇತ್ರ

ಭಕ್ತರ ಇಷ್ಟಾರ್ಥ ಸಿದ್ಧಿದಾಯಕ ಶ್ರೀ ಕ್ಷೇತ್ರ ತಿರುಪತಿ

ಆಂದ್ರಪ್ರದೇಶದ ತಿರುಪತಿ ದೇಶದಲ್ಲೇ ಅತೀ ಶ್ರೀಮಂತ ಶ್ರೀಕ್ಷೇತ್ರ ಎಂದು ಪರಿಗಣಿಸಲಾಗಿದೆ.ತಿರುಪತಿಯಲ್ಲಿರುವ ...