ಹಿಮಾಲಯ ಪವಿತ್ರ ಕ್ಷೇತ್ರಗಳ ಸುಂದರ ತಾಣ

ಹಿಮಾಚಲ ಪ್ರದೇಶದ ಮನಾಲಿ-ಕೆಲಂಗ್‌ ರಾಜ ಮಾರ್ಗದಿಂದ 51ಕಿ.ಮೀ. ದೂರದಲ್ಲಿ 3,978 ಮೀಟರ್‌ ಎತ್ತರದ ರೋಹತಾಂಗ್‌ ಪ್ರದೇಶ ಇದೆ. ಇಲ್ಲಿ ಎಲ್ಲೆಲ್ಲೂ ಹಿಮಾಚ್ಛಾದಿತ ಪ್ರದೇಶಗಳೇ ತುಂಬಿವೆ. ಇಲ್ಲಿ ಹಸುರಿನ ದರ್ಶನವೇ ಇಲ್ಲ. ಇಲ್ಲಿ ಅಪರಾಹ್ನಗಳಲ್ಲಿ ಹಿಮದ ಬಿರುಗಾಳಿ ಬೀಸಿ ಜನರನ್ನು ಬಲಿ ತೆಗೆದುಕೊಳ್ಳುವುದೂ ಇದೆ.

ನಿಸರ್ಗ ಸೌಂದರ್ಯ, ಪುರಾಣೋಕ್ತ ಪ್ರದೇಶಗಳ ವೀಕ್ಷಣೆಗಾಗಿ ಪ್ರವಾಸಿಗರು ಹಿಮಾಲಯದ ತಪ್ಪಲಿಗೆ ಬರುತ್ತಾರೆ. ವರ್ಷ ಪೂರ್ತಿ ಹಿಮವನ್ನೇ ಹೊದ್ದ ಬೆಳ್ಳನೆ ಬೆಟ್ಟಗಳು, ತಣ್ಣನೆಯ ಕಣಿವೆಗಳು. ಹಿಮಾಚಲದ ಮನಾಲಿ ಇಂತಹ ವಿವಿಧ ಪ್ರದೇಶಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ.

ರೋಹತಾಂಗ್‌ನ ತಪ್ಪಲು ಪ್ರದೇಶ ರೋಹತಾಂಗ್‌ ಟಾಪ್‌. ಮನಾಲಿ- ಲೇಹ್‌ ಮಾರ್ಗದಲ್ಲಿ ಸಮುದ್ರ ಮಟ್ಟದಿಂದ 13,050 ಅಡಿ ಎತ್ತರದಲ್ಲಿ ರೋಹತಾಂಗ್ ಟಾಪ್‌ ಇದೆ. ಹಿಮಾಚಲದ ಕುಲು ಘಟ್ಟ ಪ್ರದೇಶದ ಪ್ರಖ್ಯಾತ ಪ್ರವಾಸಿ ಜಾಗ ಇದು. ಮನಾಲಿಯಿಂದ ಇದು 51 ಕಿ.ಮೀ. ದೂರದಲ್ಲಿದೆ.

ರೋಹತಾಂಗ್‌ ಟಾಪ್‌ನಲ್ಲಿ ವಿಪರೀತ ಹಿಮಗಾಳಿ . ಇದರಿಂದ ರಕ್ಷಣೆ ಪಡೆಯಲು ಹೊಸ ಪ್ರವಾಸಿಗರು ಪಲ್‌ಚಾನ್‌ ಎಂಬ ಚಿಕ್ಕ ಊರಲ್ಲಿ ಬಾಡಿಗೆಗೆ ಲಭಿಸುವ ಕೋಟುಗಳನ್ನು ಖರೀದಿಸಿ ಬೆಟ್ಟ ಏರಲಾಗುತ್ತದೆ. ಮರಳುವಾಗ ವಾಪಸ್‌ ನೀಡಬೇಕು. ರೋಹತಾಂಗ್‌ ಟಾಪ್‌ನ ಬಳಿಕದ ಪ್ರದೇಶವೇ ಸೋಲಾಂಗ್‌ ಕಣಿವೆ.

ಸೋಲಾಂಗ್‌ ಕಣಿವೆ ಪ್ರದೇಶದಲ್ಲೇ ಅರ್ಜುನ ಗುಹೆ ಇದೆ. ಕಣ್ವ ಋಷಿ ಮತ್ತು ಶಾಂಡಿಲ್ಯ ಋಷಿಯ ತಪೋಭೂಮಿಯೂ ಇದೆ. ಮನಾಲಿ-ಲೇಹ್‌ ಮಾರ್ಗದಲ್ಲಿ ಮುನಿ ವಸಿಷ್ಠರ ಆಶ್ರಮವಿದೆ. ಇಲ್ಲಿ ಗಂಧಕಯುಕ್ತ ಬಿಸಿ ನೀರಿನ ಬುಗ್ಗೆ ಇದೆ.

ಅರ್ಜುನ ಪಾಶುಪತಾಸ್ತ್ರ ಪಡೆಯಲು ಇಂದ್ರನ ಕುರಿತ ತಪಸ್ಸು ಮಾಡಿದ 'ಇಂದ್ರಕಿಲ' ಕೂಡ ಇಲ್ಲೇ ಇದೆ. ವಸಿಷ್ಠ ಮತ್ತು ವ್ಯಾಸ ಋಷಿಗಳು ತಪಸ್ಸು ಮಾಡಿದ ಕ್ಷೇತ್ರ ವ್ಯಾಸ ಕುಂಡ ಇಲ್ಲಿದೆ. ಇಲ್ಲಿ ಎಲ್ಲೆಂದರಲ್ಲಿ ಪೈನ್‌ ವೃಕ್ಷಗಳು ಬೆಳೆದು ನಿಂತಿವೆ.ಸ್ಥಳಗಳನ್ನು ತನ್ನ ಮಡಿಲಲ್ಲಿ ಹೊದ್ದುಕೊಂಡು ತಣ್ಣಗೆ ಕಾಣುವ ಅನೇಕ ಪುಣ್ಯಕ್ಷೇತ್ರಗಳ ಸಂಗಮ.ಇದರಲ್ಲಿ ಇನ್ನಷ್ಟು ಓದಿ :  

ತೀರ್ಥಕ್ಷೇತ್ರ

ಭಕ್ತರ ಇಷ್ಟಾರ್ಥ ಸಿದ್ಧಿದಾಯಕ ಶ್ರೀ ಕ್ಷೇತ್ರ ತಿರುಪತಿ

ಆಂದ್ರಪ್ರದೇಶದ ತಿರುಪತಿ ದೇಶದಲ್ಲೇ ಅತೀ ಶ್ರೀಮಂತ ಶ್ರೀಕ್ಷೇತ್ರಎಂದು ಪರಿಗಣಿಸಲಾಗಿದೆ. ತಿರುಪತಿಯಲ್ಲಿರುವ ...

ಶಬರಿಮಲೆ ಪುಣ್ಯ ಕ್ಷೇತ್ರದ ತೀರ್ಥಯಾತ್ರೆ

ಅಯ್ಯಪ್ಪ ಭಕ್ತರ ಶಬರಿಮಲೆ ತೀರ್ಥಯಾತ್ರೆಯು ಈಗಾಗಲೇ ಆರಂಭವಾಗಿದೆ. ಕೇರಳದಲ್ಲಿ ನೆಲೆಸಿರುವ ಈ ಪ್ರಸಿದ್ಧ ...

ಶಬರಿಮಲೆ ಪುಣ್ಯ ಕ್ಷೇತ್ರದ ತೀರ್ಥಯಾತ್ರೆ

ಅಯ್ಯಪ್ಪ ಭಕ್ತರ ಶಬರಿಮಲೆ ತೀರ್ಥಯಾತ್ರೆಯು ಈಗಾಗಲೇ ಆರಂಭವಾಗಿದೆ. ಕೇರಳದಲ್ಲಿ ನೆಲೆಸಿರುವ ಈ ಪ್ರಸಿದ್ಧ ...

ಇಂದೋರಿನ ಖಜ್ರಾನಾ ಗಣೇಶ

ऊँ ಗಂ ಗಣಪತಯೇ ನಮೋ ನಮಃ ಸಿದ್ಧಿ ವಿನಾಯಕಾಯ ನಮೋ ನಮಃ ಅಷ್ಟ ವಿನಾಯಕಾಯ ನಮೋ ನಮಃ ಗಣಪತಿ ಬಪ್ಪಾ ಮೋರಿಯಾ...