ಪಾಕ್‌ನಿಂದ 101 ಭಾರತೀಯ ಕೈದಿಗಳ ಬಿಡುಗಡೆ

ಇಸ್ಲಾಮಾಬಾದ್ , ಸೋಮವಾರ, 24 ನವೆಂಬರ್ 2008 (14:49 IST)

ವಾರಾಂತ್ಯದಲ್ಲಿ ಆರಂಭವಾಗಲಿರುವ ಆಂತರಿಕ ಕಾರ್ಯದರ್ಶಿಗಳ ಮಾತುಕತೆಯ ಅಂಗವಾಗಿ ಪಾಕಿಸ್ತಾನವು 101 ಭಾರತೀಯ ಸೆರೆಯಾಳುಗಳನ್ನು ಭಾನುವಾರ ಬಂಧ ಮುಕ್ತಗೊಳಿಸಿದೆ. ಪಾಕ್‌ನಲ್ಲಿ ಬಂಧಿತರಾಗಿರುವ ಭಾರತೀಯ ಕೈದಿಗಳಲ್ಲಿ ಹಚ್ಚಿನ ಸಂಖ್ಯೆಯವರು ಮೀನುಗಾರರಾಗಿದ್ದಾರೆ.

ಪಾಕಿಸ್ತಾನ ಆಂತರಿಕ ಕಾರ್ಯದರ್ಶಿ ಹಾಗೂ ಭಾರತದ ಗೃಹ ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ನವೆಂಬರ್ 25ರಂದು ಆರಂಭವಾಗಲಿರುವ ಮಾತುಕತೆಯ ಮುನ್ನವೇ ಪಾಕಿಸ್ತಾನವು ಸೆರೆಯಾಳುಗಳಾಗಿರಿಸಿರುವ 99 ಭಾರತೀಯ ಮೀನುಗಾರರು ಮತ್ತು ಇಬ್ಬರು ಇತರ ಕೈದಿಗಳನ್ನು ಬಂಧಮುಕ್ತಗೊಳಿಸುವುದಾಗಿ ಪಾಕ್ ಆಂತರಿಕ ಸಚಿವಾಲಯದ ಮುಖ್ಯಸ್ಥ ರೆಹಮಾನ್ ಮಲ್ಲಿಕ್ ತಿಳಿಸಿದರು.

ಇದೇ ವೇಳೆ ಅವರು ಸದ್ಭಾವನಾ ಸೂಚನೆಯ ಭಾಗವಾಗಿ ಭಾರತದಲ್ಲಿ ಸೆರೆಯಾಳಾಗಿರುವ ಪಾಕಿಸ್ತಾನಿ ಪ್ರಜೆಗಳನ್ನು ಬಹುಬೇಗನೆ ಬಂಧ ಮುಕ್ತಗೊಳಿಸುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಭಾರತ ಮತ್ತು ಪಾಕಿಸ್ತಾನ ಆಂತರಿಕ ಕಾರ್ಯದರ್ಶಿಗಳ ಮಾತುಕತೆಯ ವೇಳೆಯಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಟ , ಡ್ರಗ್ಸ್ ಕಳ್ಳಸಾಗಣಿಕೆ ವಿರುದ್ಧ ಕಾರ್ಯತಂತ್ರ ಮತ್ತು ಎರಡು ದೇಶಗಳೊಳಗಿನ ವೀಸಾ ಪಾಲನವನ್ನು ಉದಾರೀಕರಣದ ಬಗ್ಗೆ ಚರ್ಚೆ ನಡೆಯಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...