ಮದುವೆಗಳಲ್ಲಿ ನಗೋದಕ್ಕೆ, ಅಂತ್ಯಕ್ರಿಯೆಯಲ್ಲಿ ಅಳೋದಕ್ಕೆ ಉಗ್ರರಿಂದ ನಿಷೇಧ

ಮಂಗಳವಾರ, 8 ಏಪ್ರಿಲ್ 2014 (17:07 IST)

PR
PR
ಬೀಜಿಂಗ್: ಇಸ್ಲಾಮಿಸ್ಟ್ ಉಗ್ರಗಾಮಿಗಳು ಮದುವೆ ಸಮಾರಂಭಗಳಲ್ಲಿ ನಗುವುದನ್ನು ಮತ್ತು ಅಂತ್ಯಕ್ರಿಯೆಗಳಲ್ಲಿ ಅಳುವುದನ್ನು ನಿಷೇಧಿಸಲು ಪ್ರಯತ್ನಿಸಿದ್ದು, ಉಗ್ರವಾದದ ಹುಣ್ಣನ್ನು ಅಳಿಸಿಹಾಕುವಂತೆ ಚೀನಾದ ಕ್ಸಿಂಜಿಯಾಂಗ್ ಗವರ್ನರ್ ತಿಳಿಸಿದ್ದಾರೆ.ಸಂಪನ್ಮೂಲ ಸಮೃದ್ಧ ಮತ್ತು ಆಯಕಟ್ಟಿನ ಸ್ಥಳದಲ್ಲಿರುವ ಕ್ಸಿಂಜಿಯಾಂಗ್ ಅನೇಕ ವರ್ಷಗಳಿಂದ ಹಿಂಸಾಚಾರದಿಂದ ತತ್ತರಿಸಿದೆ. ಆದರೆ ಅನೇಕ ಎಡಪಂಥೀಯ ತಂಡಗಳು ಚೀನಾದಲ್ಲಿ ಅಶಾಂತಿಗೆ ನಿಜವಾದ ಕಾರಣ ಬಿಗಿ ನೀತಿಗಳು ಸೇರಿದಂತೆ ಇಸ್ಲಾಮ್ ಮತ್ತು ಮುಸ್ಲಿಂ ಉಯಿಗುರ್ ಜನರ ಭಾಷೆಯನ್ನು ನಿಷೇಧಿಸಿರುವುದು ಎಂದು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಬೀಜಿಂಗ್ ಟಿಯಾನಮನ್ ಚೌಕದಲ್ಲಿ ಕಾರು ಸ್ಫೋಟಗೊಂಡು ಉರಿದುಹೋದ ಘಟನೆ ಮತ್ತು ಕುನ್ಮಿಂಗ್ ನಗರದಲ್ಲಿ ಕಳೆದ ತಿಂಗಳು 29 ಜನರನ್ನು ಇರಿದು ಹತ್ಯೆ ಮಾಡಿದ ಘಟನೆಯಿಂದ ಚೀನಾಗೆ ಇಸ್ಲಾಮಿಸ್ಟ್ ಉಗ್ರವಾದದ ಭಯ ಆವರಿಸಿದೆ.ಧರ್ಮಾಂಧತೆಯನ್ನು ಪ್ರಚೋದಿಸಲು ಮತ್ತು ಧಾರ್ಮಿಕ ಉಗ್ರವಾದಿಗಳು ಧಾರ್ಮಿಕಬೋಧನೆಗಳನ್ನು ತಿದ್ದಿ, ಜಿಹಾದಿ ಹುತಾತ್ಮರು ಸ್ವರ್ಗಕ್ಕೆ ಹೋಗುತ್ತಾರೆ, ಸ್ವರ್ಗದಲ್ಲಿ ಅವರಿಗೆ ಬೇಕಾದ್ದೆಲ್ಲ ಸಿಗುತ್ತದೆ ಮುಂತಾಗಿ ವೈಭವೀಕರಿಸುತ್ತಾರೆ ಎಂದು ಅವರು ಬರೆದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...