ಮಾಲೀಕನನ್ನು ಕೊಂದವನನ್ನು ಗುರುತಿಸಲು ಸಾಕ್ಷಿಯ ಕಟಕಟೆಗೆ ಬಂತು ನಾಯಿ

ಸೋಮವಾರ, 7 ಏಪ್ರಿಲ್ 2014 (13:17 IST)

PR
PR
ಲಂಡನ್: ನಾಯಿಯ ಮಾಲೀಕನನ್ನು ಕೊಂದಿದ್ದಾನೆಂದು ನಂಬಲಾದ ವ್ಯಕ್ತಿಯನ್ನು ಗುರುತಿಸುವ ಪ್ರಯತ್ನವಾಗಿ 9 ವರ್ಷ ವಯಸ್ಸಿನ ನಾಯಿಯೊಂದನ್ನು ಫ್ರೆಂಚ್ ಕೋರ್ಟ್‌ನ ಸಾಕ್ಷಿಯ ಕಟಕಟೆಗೆ ಕರೆತಂದ ವಿಚಿತ್ರ ಘಟನೆ ನಡೆದಿದೆ.ಟ್ಯಾಂಗೋ ಎಂದು ಹೆಸರಿಸಲಾದ ಲ್ಯಾಬ್ರಡಾರ್ ನಾಯಿಯನ್ನು ಕೇಂದ್ರ ಫ್ರಾನ್ಸ್‌ ನಗರ ಟೂರ್ಸ್ ಕೋರ್ಟ್‌ನ ಕಟಕಟೆಗೆ ಕರೆಸಲಾಯಿತು.ನಾಯಿಯ ಮಾಲೀಕನ ಹತ್ಯೆಯ ಬಳಿಕ ಶಂಕಿತ ಹಂತಕನ ವಿರುದ್ಧ ಆರೋಪಗಳನ್ನು ದೃಢೀಕರಿಸುವ ಪೂರ್ವಭಾವಿ ವಿಚಾರಣೆ ಸಂದರ್ಭದಲ್ಲಿ ನಾಯಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು.

ನ್ಯಾಯಾಧೀಶರು ಶಂಕಿತ ವ್ಯಕ್ತಿಗೆ ನಾಯಿಯನ್ನು ಬ್ಯಾಟ್‌ ತೋರಿಸಿ ಬೆದರಿಸುವಂತೆ ಆದೇಶ ನೀಡಿದರು. ನಾಯಿ ಟಾಂಗೋ ಅದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ತಿಳಿದು ಶಂಕಿತನ ಗುರುತು ಪತ್ತೆಹಚ್ಚುವುದು ನ್ಯಾಯಾಧೀಶರ ಉಪಾಯವಾಗಿತ್ತು.ಈ ಪರೀಕ್ಷೆಯನ್ನು ನ್ಯಾಯಯುತವಾಗಿ ಮಾಡಲು ಟ್ಯಾಂಗೋ ವಯಸ್ಸು ಮತ್ತು ತಳಿಯ ನಾರ್ಮನ್ ಎಂಬ ಹೆಸರಿನ ಎರಡನೇ ನಾಯಿಯನ್ನು 'ನಿಯಂತ್ರಣ ತಂಡ'ದ ಸೇವೆಗೆ ಕರೆಸಲಾಗಿತ್ತು.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...