Widgets Magazine

ವಿಮಾನ ಹಿಂದು ಮಹಾಸಾಗರದಲ್ಲಿ ಪತನ: ಖಚಿತಪಡಿಸಿದ ಮಲೇಷ್ಯಾ ಪ್ರಧಾನಿ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಕೌಲಾಲಂಪುರ: ಹಿಂದೂಮಹಾಸಾಗರದಲ್ಲಿ ಮಲೇಷ್ಯಾ ವಿಮಾನ ಪತನವಾಗಿದೆ ಎಂದು ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ವಿಮಾನದಲ್ಲಿರುವ ಎಲ್ಲರೂ ಮೃತಪಟ್ಟಿದ್ದಾರೆ. ವಿಮಾನದಲ್ಲಿ ಐವರು ಭಾರತೀಯ ಪ್ರಯಾಣಿಕರು ಕೂಡ ಪ್ರಯಾಣಿಸುತ್ತಿದ್ದರು.ಉಪಗ್ರಹ ದತ್ತಾಂಶದ ಹೊಸ ವಿಶ್ಲೇಷಣೆ ಪ್ರಕಾರ ಮತ್ತು ಶೋಧ ತಜ್ಞರ ಮಾಹಿತಿ ಪ್ರಕಾರ, ನಾಪತ್ತೆಯಾದ ವಿಮಾನವು ದಕ್ಷಿಣ ಹಿಂದು ಮಹಾಸಾಗರದಲ್ಲಿ ಅಪಘಾತಗೊಂಡು ಮುಳುಗಿದೆ ಎಂದು ಪ್ರಧಾನಿ ತಿಳಿಸಿದರು.

ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಮಾರ್ಚ್ 8ರಂದು ಕೌಲಾಲಂಪುರದಿಂದ ಬೀಜಿಂಗ್ ಕಡೆಗೆ ವಿಮಾನ ಹೊರಟಿದ್ದಾಗ ಎಂಎಚ್-370 ವಿಮಾನ ನಾಪತ್ತೆಯಾಗಿತ್ತು. ಮಲೇಷ್ಯಾ ವಿಮಾನದಲ್ಲಿ 239 ಪ್ರಯಾಣಿಕರಿದ್ದರು. ವಿಮಾನ ಶೋಧಕಾರ್ಯವನ್ನು ನಿಲ್ಲಿಸುತ್ತೇವೆ ಎಂದು ಪ್ರಧಾನಿ ನುಡಿದಿದ್ದಾರೆ. 25ಕ್ಕೂ ಹೆಚ್ಚು ದೇಶಗಳು ಶೋಧ ನಡೆಸಿದರೂ ವಿಮಾನದ ಅವಶೇಷಗಳ ಸುಳಿವು ಸಿಕ್ಕಿರಲಿಲ್ಲ.


ಇದರಲ್ಲಿ ಇನ್ನಷ್ಟು ಓದಿ :