ಸ್ಕರ್ಟ್ ಕೆಳಗಿನಿಂದ ಚಿತ್ರ ತೆಗೆಯುತ್ತಿದ್ದ ಏರ್ ಮಾರ್ಷಲ್ ಬಂಧನ
ವೆಬ್ದುನಿಯಾ|
ನಾಶ್ವಿಲ್ಲೆ, ಟೆನ್ನೀಸಿ: ನಾಶ್ವಿಲ್ಲೆ ಅಂತಾರಾಷ್ಟ್ರೀಯ ವಿಮಾನಿನಿಲ್ದಾಣದಲ್ಲಿ ಮಹಿಳೆಯರು ವಿಮಾನದ ಮೆಟ್ಟಿಲನ್ನು ಹತ್ತುವಾಗ ಕೆಳಗೆ ನಿಂತು ಸ್ಕರ್ಟ್ ಅಡಿಯಿಂದ ಸೆಲ್ ಫೋನ್ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದ ಫೆಡೆರೆಲ್ ಏರ್ ಮಾರ್ಷಲ್ನನ್ನು ನಾಶ್ವಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಸೌತ್ವೆಸ್ಟ್ ಏರ್ಲೈನ್ ಫ್ಲೈಟ್ 3132ರಲ್ಲಿ ಕರ್ತವ್ಯನಿರತನಾಗಿದ್ದ ಅಡಾಂ ಬಾರ್ಚ್ ಮಹಿಳೆಯ ಸ್ಕರ್ಟ್ ಅಡಿಯಿಂದ ಚಿತ್ರ ತೆಗೆಯುತ್ತಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬರು ಕೂಡಲೇ ಸೆಲ್ಪೋನ್ ಕಸಿದುಕೊಂಡರು.