ಲಂಡನ್: ಮತ್ತೆ ಇಂಗ್ಲೆಂಡ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ನಸುಕಿನ ವೇಳೆಯಲ್ಲಿ ಲಂಡನ್ ಬ್ರಿಡ್ಜ್ ಮತ್ತು ಬರೋ ಮಾರ್ಕೆಟ್ ಪ್ರದೇಶಗಳಲ್ಲಿ ಉಗ್ರರು ದಾಳಿ ನಡೆಸಿದ್ದು, 6 ಮಂದಿ ಸಾವಿಗೀಡಾಗಿದ್ದಾರೆ. ಲಂಡನ್ ಬ್ರಿಡ್ಜ್ ನಲ್ಲಿ ಎರ್ರಾಬಿರ್ರಿ ವ್ಯಾನ್ ನುಗ್ಗಿಸಿದ ದುಷ್ಕರ್ಮಿಗಳು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಬರೋ ಮಾರ್ಕೆಟ್ ಪ್ರದೇಶದಲ್ಲಿ ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ ಸುಮಾರು 20 ಮಂದ ಗಾಯಗೊಂಡಿದ್ದಾರೆ.ಪೊಲೀಸರು ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಘಟನೆ ಬಗ್ಗೆ ವಿಶ್ವ