73 ವಿದ್ಯಾರ್ಥಿಗಳ ಅಪಹರಣ!

ನೈಜೀರಿಯಾ| Ramya kosira| Last Modified ಶುಕ್ರವಾರ, 3 ಸೆಪ್ಟಂಬರ್ 2021 (11:01 IST)
ಲಾಗೋಸ್(ನೈಜೀರಿಯಾ) : ವಾಯವ್ಯ ನೈಜೀರಿಯಾದಲ್ಲೂ ಶಸ್ತ್ರಧಾರಿಗಳಾದ ದುಷ್ಕರ್ಮಿಗಳು ಶಾಲೆಯೊಂದರಿಂದ 73 ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೊದಲು ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಒತ್ತೆಯಾಳುಗಳನ್ನು ಭಾರಿ ಮೊತ್ತದ ಹಣ ನೀಡಿ ಬಿಡುಗಡೆಗೊಳಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಯಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಿಂದ ವಿದ್ಯಾರ್ಥಿಗಳನ್ನು ಶಸ್ತ್ರಧಾರಿಗಳಾದ ಗುಂಪೊಂದು ಬುಧವಾರ ಅಪಹರಿಸಿದೆ. ಅಪಹರಣಕ್ಕೆ ಮೊದಲು ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.> ವಿದ್ಯಾರ್ಥಿಗಳ ಬಿಡುಗಡೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.> ಉತ್ತರ ನೈಜೀರಿಯಾದಲ್ಲಿ ಡಿಸೆಂಬರ್ನಿಂದ ಈವರೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪಹರಣಕ್ಕೊಳಗಾಗಿದ್ದಾರೆ. ಇವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಕೆಲ ವಿದ್ಯಾರ್ಥಿಗಳನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದರಲ್ಲಿ ಇನ್ನಷ್ಟು ಓದಿ :