ಸಿಂಹದ ಮುಂದೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ ಮಹಿಳೆ

ನ್ಯೂಯಾರ್ಕ್| pavithra| Last Modified ಶುಕ್ರವಾರ, 4 ಅಕ್ಟೋಬರ್ 2019 (08:50 IST)
ನ್ಯೂಯಾರ್ಕ್ : ಮಹಿಳೆಯೊಬ್ಬಳು ಭದ್ರತೆ ಮುರಿದು ಸಿಂಹದ ಮುಂದೆ ಹೋಗಿ ನಿಂತು ಅದನ್ನು ಕೆರಳಿಸಲು ಯತ್ನಿಸಿದ ಘಟನೆ ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯದಲ್ಲಿ ನಡೆದಿದೆ.
ಮೃಗಾಲಯಕ್ಕೆ ಬಂದಿದ್ದ ಮಹಿಳೆ ಸಿಂಹವಿದ್ದ ಸ್ಥಳಕ್ಕೆ ಜಿಗಿದು ಅದರ ಮುಂದೆ ಡ್ಯಾನ್ಸ್ ಮಾಡಿ ಕೆರಳಿಸುವ ಯತ್ನ ಮಾಡಿದ್ದಾರೆ. ಅದೃಷ್ಟವಶಾತ್ ಸುಮ್ಮನೆ ನಿಂತು ನೋಡುತ್ತಿದ್ದರಿಂದ ಆಕೆಗೆ ಯಾವುದೇ ಸಂಭವಿಸಿರಲಿಲ್ಲ. ಸದ್ಯ ಮಹಿಳೆಯನ್ನು ರಕ್ಷಿಸಲಾಗಿದೆ.


ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗುತ್ತಿದೆ. ಯಾರೇ ಆಗಲಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು. ಇದರಿಂದ ಜೀವವೇ ಹೋಗುವ ಸಾಧ್ಯತೆಗಳು ಇರುತ್ತವೆ ಎಂದ ಮೃಗಾಲಯದವರು ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :