ನವದೆಹಲಿ: ಭಾರತ ಮತ್ತು ನೇಪಾಳ ಜತೆಗೆ ಗಡಿ ತಂಟೆ ಮಾಡಿಕೊಂಡಿರುವ ಚೀನಾ ಇದೀಗ ಮತ್ತೊಂದು ನೆರೆಯ ರಾಷ್ಟ್ರ ಭೂತಾನ್ ಕಡೆಗೆ ವಕ್ರದೃಷ್ಟಿ ಬೀರಿದೆ. ಭಾರತದ ಸೈನಿಕರ ಜತೆಗೆ ಗುದ್ದಾಟ ನಡೆಸಿದ ಚೀನಾ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿ ಮತ್ತೊಂದೆಡೆ ಅವರ ಭೂಭಾಗವನ್ನು ಉಪಾಯವಾಗಿ ನುಂಗಿ ಹಾಕಿತ್ತು.ಇದೀಗ ಭೂತಾನ್ ವಿರುದ್ಧ ಕೆಂಗಣ್ಣು ಬೀರಿದೆ. ಭಾರತ ಮತ್ತು ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪುಟ್ಟ ರಾಷ್ಟ್ರ ಭೂತಾನದ ಪೂರ್ವಭಾಗದಲ್ಲಿರುವ ತ್ರಾಶಿಗಂಗ್ ನಲ್ಲಿ ಅಲ್ಲಿನ ಸರ್ಕಾರ