ಅಹಮದಾಬಾದ್(ಆ.13): ಕೋವಿಡ್ 19 ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ತೃತೀಯ ದರ್ಜೆ ಅಧಿಕಾರಿಯನ್ನು ಭಾರತೀಯ ವಾಯುಸೇನೆ ಸೇವೆಯಿಂದ ವಜಾಗೊಳಿಸಿದೆ. ದೇಶದಲ್ಲಿ ಒಟ್ಟು 9 ವಾಯುಪಡೆ ಸಿಬ್ಬಂದಿ ಲಸಿಕೆ ನಿರಾಕರಿಸಿದ್ದರು. ಅವರಿಗೆಲ್ಲಾ ವಾಯುಸೇನೆ ನೋಟಿಸ್ ನೀಡಿತ್ತು ನೋಟಿಸ್ಗೆ ಉತ್ತರಿಸದ ಒಬ್ಬನನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರವನ್ನು ಪ್ರಶ್ನಿಸಿ ವಜಾಗೊಂಡ ಅಧಿಕಾರಿ ಯೋಗೇಂದ್ರ ಕುಮಾರ್, ಗುಜರಾತ್ ಹೈಕೋರ್ಟ್ನ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಮನವಿಯನ್ನು ವಜಾಗೊಳಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರು ಸಾಲಿಸಿಟರ್